
ವಿದ್ಯಾರ್ಥಿ ವೇತನ. ಜೆಸಿಐ.ಮೂಡಿಗೆರೆಯಿಂದ
ಜೆಸಿಐ ಭಾರತದಿಂದ ಬಡ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ವನ್ನು ಮೂಡಿಗೆರೆ ಜೆಸಿ ವತಿಯಿಂದ ಬಾಲಿಕಾ ಸರ್ಕಾರಿ ಪ್ರೌಢಶಾಲೆಯ ಒಂಬತ್ತು ವಿದ್ಯಾರ್ಥಿಗಳಿಗೆ ನೀಡಲಾಯಿತು ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಅನುಸೂಯ ಹಾಗೂ ಶಿಕ್ಷಕರು ಹಾಗೂ ಮೂಡಿಗೆರೆ ಜೆಸಿ ಸಂಸ್ಥೆಯ ಅಧ್ಯಕ್ಷರಾದ ಸುಪ್ರೀತ್, ಎಂ ಡಿ ವಿಜಯಕುಮಾರ್, ಪದಾಧಿಕಾರಿಗಳಾದ ಸುದೀಪ್ ತ್ರಿಪುರ, ವಿಶ್ವ ಕುಮಾರ್, ನಿಯೋಜಿತ ಅಧ್ಯಕ್ಷರಾದ ಪ್ರದೀಪ್ ಕುನ್ನಹಳ್ಳಿ, ಜೆಸಿಐ ಯುವ ಮಾಣಿಕ್ಯದ ಅಧ್ಯಕ್ಷರಾದ ಮೊಹಮ್ಮದ್ ಭಾಗವಹಿಸಿದ್ದರು.