“ರೋಬೋ ಆತ್ಮಹತ್ಯೆ…!!!”
1 min read
ಆತ್ಮಹತ್ಯೆಗೆ ಕೆಲಸದ ಒತ್ತಡ ಕಾರಣವಾಗಿರುವುದನ್ನು ನಾವು ನೋಡಿದ್ದೇವೆ. ಆದರೆ, ರೋಬೋಟ್‌ಗಳೂ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿರುವುದನ್ನು ನೀವು ಎಂದಾದರೂ ಕೇಳಿದ್ದೀರಾ..? ಹೌದು, ರೋಬೋಟ್‌ವೊಂದು ಹೆಚ್ಚಿನ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ನಿಜಪ್ರಸಂಗ ದಕ್ಷಿಣ ಕೊರಿಯಾದಿಂದ ವರದಿಯಾಗಿದೆ.
ದಕ್ಷಿಣ ಕೊರಿಯಾದ ಗುಮಿ ನಗರ ಪಾಲಿಕೆ ಕಚೇರಿಯಲ್ಲಿ ಸೇವೆಯಲ್ಲಿ ತೊಡಗಿಕೊಂಡಿದ್ದ ರೋಬೋಟ್ ಮೆಟ್ಟಿಲುಗಳಿಂದ ಜಿಗಿದಿದೆ.
ಪರಿಣಾಮವಾಗಿ ಅದರ ಬಿಡಿ ಭಾಗಗಳು ನಾಶವಾಗಿದೆ. ಬಿಡಿ ಭಾಗಗಳನ್ನು ಸಂಗ್ರಹಿಸಲಾಗಿದ್ದು, ಈ ಘಟನೆಗೆ ಕಾರಣವಾದ ಅಂಶಗಳನ್ನು ತಜ್ಞರು ಕಲೆ ಹಾಕುತ್ತಿದ್ದಾರೆ. ರೋಬೋ ನಿರ್ಮಾತೃ ಕಂಪೆನಿಯೂ ಈ ಆತ್ಮಹತ್ಯೆಗೆ ಕಾರಣವಾದ ಅಂಶಗಳನ್ನು ಸಂಗ್ರಹಿಸುತ್ತಿದೆ.
ಬೇರ್ ರೋಬೋಟಿಕ್ಸ್ ಕಂಪೆನಿ ಈ ರೋಬೋಟ್‌ನ್ನು ಅಭಿವೃದ್ದಿಪಡಿಸಿತ್ತು. 2023ರಿಂದ ಗುಮಿ ನಗರ ಪಾಲಿಕೆಯಲ್ಲಿ ಈ ರೋಬೋ ಕಾರ್ಯನಿರ್ವಹಿಸುತ್ತಿತ್ತು. ಕಡತಗಳ ವಿತರಣೆ, ನಗರದ ಪ್ರಚಾರ, ಅಗತ್ಯ ಮಾಹಿತಿಗಳ ಪೂರೈಕೆ ಸಹಿತ ಹಲವು ಕಾರ್ಯಗಳನ್ನು ಬಹುಮುಖಿಯಾಗಿ ನಡೆಸುತ್ತಿತ್ತು.
ರೋಬೋ ಆತ್ಮಹತ್ಯೆ ದಕ್ಷಿಣ ಕೊರಿಯಾದಲ್ಲಿ ನಡೆದ ಮೊದಲ ಘಟನೆಯಾಗಿದ್ದು, ಇದು ವಿಶ್ವದಲ್ಲಿ ದಾಖಲಾದ ಚೊಚ್ಚಲ ಪ್ರಕರಣ ಎಂದೂ ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೋಬೋಟ್ ಬಗ್ಗೆ ನೆಟ್ಟಿಗರಿಂದ ವಿಷಾದ, ಅನುಕಂಪದ ಮಾತುಗಳು ವ್ಯಕ್ತವಾಗಿವೆ.
✍️ಬರಹ ಕೃಪೆ.✍️
.
ಸಿದ್ದಿಕ್ ಚಕ್ಕಮಕ್ಕಿ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.