ಪೋಲಿಸರಿಂದ ಪೊಲೀಸರಿಗೆ ಬಿತ್ತು ದಂಡ.
1 min read
ಪೋಲಿಸರಿಂದ ಪೊಲೀಸರಿಗೆ ಬಿತ್ತು ದಂಡ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ರಸ್ತೆ ಮಧ್ಯಅಡ್ಡಾ ದಿಡ್ಡಿ ವಾಹನ ನಿಲ್ಲಿಸಿದಕ್ಕೆ ಪೋಲಿಸರಿಂದ ಪೊಲೀಸರಿಗೆ ಬಿತ್ತು ದಂಡ.
ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಪ್ರವಾಸ ಮಾಡುತಿದ್ದ ಶಿವಮೊಗ್ಗ ಪೊಲಿಸರು ರಸ್ತೆ ಮದ್ಯದಲ್ಲಿ ವಾಹನ ನಿಲ್ಲಿಸಿ ಸಂಚಾರಿ ನಿಯಮವನ್ನು ಪಾಲಿಸದೆ ದರ್ಪ ತೊರಿದ್ದಾರೆ.
ಇದರಿಂದ ಸುಮಾರು ಅರ್ದ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಕೊಟ್ಟಿಗೆಹಾರದಲ್ಲಿ ಪ್ರವಾಸಿಗರಿಂದ ಸಂಚಾರ ದಟ್ಟಣೆಯಾಗಿತ್ತು.
ಸಮಸ್ಯೆಯನ್ನು ಅರಿತ ಸಾರ್ವಜನಿಕರು ಪೋಲಿಸ್ ಸ್ಟೆಷನ್ನಿಗೆ ಕರೆಮಾಡಿದ್ದಾರೆ.
ಕೂಡಲೆ ಸಬ್ ಇನ್ಸ್ಪೆಕ್ಟರ್ ಕೌಸಿಕ್ ಸ್ಥಳಕ್ಕೆ ಆಗಮಿಸಿ ವಾಹನ ತೆರವುಗೊಳಿಸಿ 500/-ರೂ ದಂಡ ವಿದಿಸಿದರು.
ಬಳಿಕ ವಾಹನದಲ್ಲಿದ್ದವರು ಶಿವಮೊಗ್ಗ ಪೊಲಿಸರೆಂದು ತಿಳಿದುಬರುತ್ತದೆ.ಸಂಚಾರ ನಿಯಮ ಪಾಲಿಸದ ಪೊಲೀಸರಿಗೆ ದಂಡದ ಬಿಸಿ ಮುಟ್ಟಿದೆ.