ನೀವು ಕ್ಲೀನ್ ಶೇವ್ ಮಾಡುತ್ತೀರಾ.??? ಹುಷಾರ್…! ನಿಮಗೂ ಹೀಗಾಗ ಬಹುದು…ಎಚ್ಚರ…!!!!
1 min read
ಬೆಳೆದು ನಿಂತಿರುವ ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಕೆಲವರು ಬುದ್ಧಿವಾದ ಹೇಳುವಾಗ ಎರಡೇಟು ಹೊಡೆದು ಅವರನ್ನು ಸರಿ ದಾರಿಗೆ ತರುವ ಯತ್ನ ಮಾಡುತ್ತಾರೆ.
ಈಗಿನ ಕಾಲದ ಯುವಕ,ಯುವತಿಯರು ತಮ್ಮ ಮುಖಕ್ಕೆ ಅಥವಾ ತಮ್ಮ ಇಚ್ಛೆಗೆ ತಕ್ಕಂತೆ ಫ್ಯಾಷನ್ ಹಾಗೂ ಸ್ಟೈಲ್ ಮಾಡುವುದು ಸರ್ವೇಸಾಮಾನ್ಯ.ಅದರಲ್ಲೂ ಯುವಕರು ಗುಡ್ಡ,ಮೀಸೆ,ತಲೆ ಕೂದಲುಗಳನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸ ಮಾಡಿಸಿಕೊಳ್ಳುತ್ತಾರೆ.
ಆದರೆ ಇಲ್ಲೊಬ್ಬ ತಂದೆ ತನ್ನ ಪುತ್ರ ಕ್ಲೀನ್ ಶೇವ್ ಮಾಡಿಸಿಕೊಂಡ ಎಂಬ ಕಾರಣಕ್ಕೆ ಅಮಾನುಷವಾಗಿ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಇದರ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಲ್ಲಿಯರೆವಗೆ 12.9 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಯುವಕನ ತಂದೆಯ ಅತಿರೇಕದ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ಆತನ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಈ ಘಟನೆ ಭಾರತದ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.
ವಿಡಿಯೋ ನೋಡಿ ಗಾಬರಿಯಾಗ್ತೀರಾ…
ವೈರಲ್ ಆಗಿರುವ ವಿಡಿಯೋದಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಬಂದಿರುವ ಯುವಕ ತನ್ನ ತಂದೆಗೆ ಸರ್ಪ್ರೈಸ್ ನೀಡಲು ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಾನೆ. ಹಿಂದಿನಿಂದ ಬಂದ ತಂದೆ ಆತನ ಹೊಸ ಲುಕ್ ನೋಡಿ ಗಡ್ಡ ಮೀಸೆ ಯಾಕೆ ಬೋಳಿಸಿದ್ದೀಯಾ ಎಂದು ಹೇಳುತ್ತಾ ಏಕಾಏಕಿ ಕಪಾಳಕ್ಕೆ ಬಾರಿಸುತ್ತಾನೆ. ಬಳಿಕ ಆತನ ಕುತ್ತಿಗೆ ಹಿಡಿದು ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
✍🏻ಬರಹ ಕೃಪೆ.✍🏻
ಸಿದ್ದಿಕ್ ಚಕ್ಕಮಕ್ಕಿ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.