ಎಲೆ ಅಡಿಕೆ ಅಜ್ಜಿ ಇನ್ನಿಲ್ಲ.
1 min read
ಎಲೆ ಅಡಿಕೆ ಅಜ್ಜಿ ಇನ್ನಿಲ್ಲ.
ಮೂಡಿಗೆರೆಯಲ್ಲಿ ಸುಮಾರು 35 ವರ್ಷಗಳ ಹಿಂದಿನಿಂದಲೂ ಎಲೆ ಅಡಿಕೆ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದಂತಹ ತಮಿಳು ನಾಡು ಮೂಲದ ನಾಗಮ್ಮ ಎಂಬ ಸುಮಾರು 83 ವರ್ಷ ಪ್ರಾಯದವರು 20 ದಿವಸದಿಂದ ಮೂಡಿಗೆರೆಯ ರವಿ ಕ್ಯಾಂಟೀನ್ ಮುಂಭಾಗ ಬಿದ್ದಿದ್ದರು.
ಇದನ್ನು ಕಂಡು ಸಾರ್ವಜನಿಕರಿ ಕರೆಮಾಡಿದಾಗ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು.
ಇಂದು ರಾತ್ರಿ ಈ ಅಜ್ಜಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೊಣು. ಅಬ್ದುಲ್ ರಹಮಾನ್. ಶರೀಫ್ ಫಿಶ್ ಹಾಗೂ ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯತಿಯ ಮುಖಾಂತರ ಮೂಡಿಗೆರೆಯ ಬೀಜುವಳ್ಳಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು