ಬಿಪಿಎಲ್ ಕಾರ್ಡ್ ರದ್ದು ಪಡಿಸಿ……..
1 min read
ಬಿಪಿಎಲ್ ಕಾರ್ಡ್ ರದ್ದು ಪಡಿಸಿ……..
ಸರ್ಕಾರಿ ಬಸ್ಸುಗಳು ಉಚಿತ ಎಂದು ಸಂಭ್ರಮಿಸುವ ಜನರೇ ಸರ್ಕಾರಿ ಶಾಲೆಗಳೂ ಕೂಡ ಉಚಿತವಾಗಿವೆ. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆಗಳು ಸಂಭ್ರಮಿಸಲಿ.
ಉಚಿತ ಹಾಗೂ ನೈತಿಕ ಶಿಕ್ಷಣ ಉಳಿಯಲಿ.
ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸದೆ ಸಾವಿರಾರು ಲಕ್ಷಾಂತರ ರೂಪಾಯಿಗಳನ್ನು ಕಟ್ಟಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವ ಎಲ್ಲರ ಸರ್ಕಾರಿ ಬಿ.ಪಿ.ಎಲ್. ಕಾರ್ಡ್ ಹಾಗೂ ಉಚಿತ ಸರ್ಕಾರಿ ಸೌಲಭ್ಯಗಳೆಲ್ಲವನ್ನು ರದ್ದು ಮಾಡಿದರೆ ಮುಚ್ಚಿಹೋದ ಸರ್ಕಾರಿ ಶಾಲೆಗಳು ತಾನಾಗೆ ತೆರೆಯತ್ತವೆ.
ಯಾವುದನ್ನೇ ಆಗಲಿ, ಮಾಡುವ ಇಚ್ಚಾ ಶಕ್ತಿ ಮತ್ತು ಧೈರ್ಯ ಇರಬೇಕು ಅಷ್ಟೆ.
ಜನರಿಗೆ ಸತ್ಯ ತಿಳಿದಿದ್ದರೂ ಸಹ ಜನ ಭಯ ಮತ್ತು ಅಸಹಾಯಕತೆಯನ್ನು ಬಿಡುವುದಿಲ್ಲ.
ಕಳ್ಳ ರಾಜಕಾರಣಿಗಳು ತಮ್ಮ ರಾಜಕೀಯದ ಬೇಳೆ ಬೇಯಿಸಲು ಬಡವರಿಗೆ ಉಚಿತವಾಗಿ ಒಂದು ಕಡೆಯಿಂದ ಕೊಡುವುದನ್ನು ಇನ್ನೊಂದು ಕಡೆಯಿಂದ ಅದರ ಎರಡು ಪಟ್ಟು ಕೀಳುವುದನ್ನೂ ನಿಲ್ಲಿಸುವುದಿಲ್ಲ.
ಅದೆಷ್ಟೋ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ರಾಜ್ಯದ ರಾಜಕೀಯ ಮುಖಂಡರು ಶಾಸಕ ಸಂಸದರುಗಳೇ ಆಗಿದ್ದಾರೆ,
ಜನ ನಿಜವಾಗಿಯೂ ಉಚಿತವಾಗಿ ಸಿಗಬೇಕಾದ ಮೂಲಭೂತ ಸೌಕರ್ಯಗಳಾದ ವಿದ್ಯಾಭ್ಯಾಸವನ್ನು ಮತ್ತು ಆರೋಗ್ಯವನ್ನು ಮಾರಿಕೊಳ್ಳುವ ಭ್ರಷ್ಟರಿಗೆ ಮತ್ತೆ ಮತ್ತೆ ಮತ ನೀಡಿ ಗೆಲ್ಲಿಸಿ ಇಡೀ ದೇಶದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ.
ಜನರೆಲ್ಲ ಸರಿಯಾಗದ ಹೊರತು ಈ ವ್ಯವಸ್ಥೆಯೂ ಸರಿಯಾಗದು..!
ಬರಹ ಕೃಪೆ.
ಶಬರೀಶ್ ಆರ್
ಸದಸ್ಯರು
ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ
ಶೃಂಗೇರಿ