ಮಾನವರ ಮತ್ತು ಪ್ರಾಣಿಗಳ ಮಾರಣ ಹೋಮ.
1 min read
ಮಾನವರ ಮತ್ತು ಪ್ರಾಣಿಗಳ ಮಾರಣ ಹೋಮ.


ಒಂಟಿ ಸಲಗ ಅನುಮಾಸ್ಪದ ಸಾವು: ವಿದ್ಯುತ್ ಹರಿಸಿ ಹತ್ಯೆ ಮಾಡಿರುವ ಶಂಕೆ
ವಿದ್ಯುತ್ ಹರಿಸಿ ಕಾಡಾನೆಯೊಂದನ್ನು ಕೊಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಕಂಚಿನ ಕಲ್ಲು ದುರ್ಗದ ಖಾಸಗಿ ಕಾಫಿ ತೋಟದಲ್ಲಿ ನಡೆದಿದೆ.
ಕಳೆದ ವಾರ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ ದುರ್ಗ ಸಮೀಪದ ಕೆಸುವಿನಕಲ್ ಕಾಫಿ ಎಸ್ಟೇಟ್ ನಲ್ಲಿ ಆನಂದ ಪೂಜಾರಿ ಎಂಬುವವರನ್ನು ಈ ಕಾಡಾನೆ ತುಳಿದು ಸಾಯಿಸಿತ್ತು ಎನ್ನಲಾಗಿದೆ. ಈ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತಯಾರಿ ನಡೆಸಿತ್ತು. ಆದರೆ ಇದೀಗ ಖಾಸಗಿ ಕಾಫಿ ತೋಟದಲ್ಲಿ ವಿದ್ಯುತ್ ಹರಿಸಿ ಕಾಡಾನೆಯನ್ನು ಕೊಲ್ಲಲಾಗಿದೆ ಎನ್ನಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಇತ್ತೀಚೆಗೆ ಮೂಡಿಗೆರೆ, ಆಲ್ದೂರು ಭಾಗದಲ್ಲಿ ಆನೆ ಮಾನವ ಸಂಘರ್ಷ ತಾರಕಕ್ಕೆ ಏರುತ್ತಿದ್ದು, ಈ ಸಂದರ್ಭದಲ್ಲಿ ಆನೆ ಸವಾಪ್ಪಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಮಾನವರ ಪ್ರಾಣಕ್ಕೆ ಬೆಲೆ ನೀಡದಿರುವ ಸರ್ಕಾರ ಪ್ರಾಣಿಗಳ ಪ್ರಾಣಕ್ಕೂ ಸಂಚಾಕಾರ ತಂದಿದೆ.
ಕೂಡಲೆ ಜನಪ್ರತಿನಿದಿಗಳು ಎಚ್ಚೆತ್ತು ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡದೆ ಇದ್ದರೆ ಮುಂದೊಂದು ದಿನ ಪ್ರಾಣಿಗಳ ಮನುಷ್ಯರ ಮಾರಣ ಹೋಮ ನಡೆಯುವುದರಲ್ಲಿ ಅನುಮಾನವಿಲ್ಲ.