“ಕಾಫಿನಾಡಿನ ಚೆಲುವ ನಾಸ್ತುಷನಿಗೆ ಒಲಿದ ಟಿ20 ವಿಶ್ವಕಪ್ನಲ್ಲಿ ಸ್ಥಾನ.”
1 min read
ಮುಂಬರುವ ಟಿ20 ವಿಶ್ವಕಪ್ಗಾಗಿ ಅಮೆರಿಕ ಆಯ್ಕೆ ಮಾಡಿರುವ ತಂಡದಲ್ಲಿ ಕನ್ನಡಿಗ ನಾಸ್ತುಷ್ ಕೆಂಜಿಗೆ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಗೆಳೆಯ,ಲೇಖಕ ಪ್ರದೀಪ್ ಕೆಂಜಿಗೆ ಅವರ ಪುತ್ರರಾಗಿದ್ದಾರೆ.
ಅಮೆರಿಕ ತಂಡದಲ್ಲಿ ಬಹುತೇಕ ಭಾರತೀಯ ಮೂಲದ ಆಟಗಾರರೇ ತುಂಬಿಕೊಂಡಿದ್ದಾರೆ.ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್,ಹರ್ಮೀತ್ ಸಿಂಗ್,ಜೆಸ್ಸಿ ಸಿಂಗ್,ಮಿಲಿಂದ್ ಕುಮಾರ್,ನಿತೀಶ್ ಕುಮಾರ್,ಸೌರಭ್ ನೇತ್ರಾವಲ್ಕರ್ ಭಾರತೀಯ ಮೂಲದ ಆಟಗಾರರಾಗಿದ್ದಾರೆ.
ಕೋರಿ ಆ್ಯಂಡರ್ಸನ್ಗೂ ಸ್ಥಾನ:
ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ 2015ರ ಪುರುಷರ ವಿಶ್ವಕಪ್ ತಂಡದ ಫೈನಲಿಸ್ಟ್ ಕೋರಿ ಆ್ಯಂಡರ್ಸನ್ಗೂ ಸಹ ಅಮೆರಿಕ ತಂಡದಲ್ಲಿ ಸ್ಥಾನ ನೀಡಲಾಗಿದೆ.ಆ್ಯಂಡರ್ಸನ್ 33 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು,568 ರನ್ ಗಳಿಸಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.