“ಮೂಡಿಗೆರೆಯ ಬಿಜಿಎಸ್ ಒಕ್ಕಲಿಗರ ಸಂಘ ಪದವಿಪೂರ್ವ ಕಾಲೇಜಿಗೆ ಶೇಕಡಾ ನೂರರಷ್ಟು ಫಲಿತಾಂಶ : ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕಾಲೇಜಿನ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ.”
1 min read
2023-24 ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 74 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 74 ವಿದ್ಯಾರ್ಥಿಗಳೂ ತೇರ್ಗಡೆಯಾಗಿ ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ. ಇದರಲ್ಲಿ ವಿಜ್ಞಾನ ವಿಭಾಗದಲ್ಲಿ 53 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳೂ ಸಹ ತೇರ್ಗಡೆ ಹೊಂದಿದ್ದು, ಶೇಕಡಾ 100 ರಲ್ಲಿ 30 ವಿದ್ಯಾರ್ಥಿಗಳು ಅತ್ಯುನ್ನತ ಹಾಗೂ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಕು. ಆತ್ಮಿಕ ಡಿ. ಎ, ಕು. ಇಂಚರ ಕೆ. ಸಿ, ಕು. ಕಶಿಫ ಫಾತೀಮ ಎಂಬ ಮೂವರು ವಿದ್ಯಾರ್ಥಿನಿಯರು ತಲಾ 572 ಅಂಕಗಳನ್ನು ಪಡೆದು ಶೇ 95.3 ಪಡೆದಿರುತ್ತಾರೆ.
*ಬಿಜಿಎಸ್ ಕಾಲೇಜಿನ ವಿಹಂಗಮ ನೋಟ.*
ಹಾಗೂ ವಾಣಿಜ್ಯ ವಿಭಾಗದಲ್ಲಿ 21 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡಾ 100 ರಲ್ಲಿ 12 ವಿದ್ಯಾರ್ಥಿಗಳು ಅತ್ಯುನ್ನತ ಹಾಗೂ 09 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿರುತ್ತಾರೆ. ಕು. ಚಮನ್ ವಿನ್ಯಾಸ್ ಎಂಬ ವಿದ್ಯಾರ್ಥಿ 583 ಅಂಕ ಪಡೆದು ಶೇ 97.16 ಪಡೆದಿರುತ್ತಾರೆ.
ಪ್ರತೀ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವಿವರ :
1) Kannada – 01
2)Computer science -02
2) Economics -02
ದ್ವಿತೀಯಾ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ನ ಶೃಂಗೇರಿ ಶಾಲೆಯ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರು ಹಾಗೂ ಕಾಲೇಜಿನ ಪ್ರಾಚಾರ್ಯರಾದ ಸಂದೇಶ್ ಮತ್ತು ಉಪನ್ಯಾಸಕರು ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.