AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪತ್ತೆ : ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರು.”

1 min read

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಒಂಟಿ ಸಲಗವೊಂದು ಪತ್ತೆಯಾಗಿದೆ.ಆನೆ ರಸ್ತೆ ದಾಟಿ ಹೋಗುತ್ತಿರುವುದು ಬೈಕ್ ಸವಾರರೊಬ್ಬರ ವೀಡಿಯೋದಲ್ಲಿ ಸೆರೆಯಾಗಿದೆ.

ಕಳೆದೆರಡು ತಿಂಗಳುಗಳಿಂದ ‌ಈ ಭಾಗದಲ್ಲಿ ಕಾಡಾನೆಗಳ ಕಾಣ ಸಿಕ್ಕುತ್ತಿದೆ.ಇದು ಈ ಭಾಗದಲ್ಲಿ ಸಂಚರಿಸುತ್ತಿರುವ ವಾಹನ ಸವಾರರಿಗೆ ಭೀತಿ ಹುಟ್ಟಿಸಿದೆ.ಬೆಳ್ತಂಗಡಿಯ ಬಾಂಜಾರು ಮಲೆ ಕಡೆಯಿಂದ ಬಂದಂತಹ ಕಾಡಾನೆಯೊಂದು ಕೆಲವು ಹೊತ್ತು ರಸ್ತೆ ಬದಿಯಲ್ಲಿ ನಿಂತುಕೊಂಡಿರುವುದು ಕಂಡು ಬಂದಿದೆ.ಬಳಿಕ ನೆರಿಯ ಕಾಡಿನತ್ತ ತೆರಳಿದೆ.ಈ ವೇಳೆ ಆನೆಯನ್ನು ಗಮನಿಸದ ಬೈಕ್ ಸವಾರರೊಬ್ಬರು ಆನೆ ದಾಟುತ್ತಿರುವ ಸಂದರ್ಭದಲ್ಲಿಯೇ ಸಂಚರಿಸಿ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಸದ್ಯ,ಕಾಡಿನ ಕೆರೆಗಳು,ನೇತ್ರಾವತಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಕೇವಲ ಮೃತ್ಯುಂಜಯ ನದಿಯಲ್ಲಿ ಮಾತ್ರ ನೀರು ಹರಿಯುತ್ತಿದೆ. ಈ ನದಿ ಹರಿಯುವ ನೆರಿಯ, ಚಾರ್ಮಾಡಿ ಭಾಗದಲ್ಲಿ ಕಾಡಾನೆಗಳು ಆಶ್ರಯ ಪಡೆದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ದರಿಂದ ಈ ಭಾಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ಜಾಗೃತೆ ವಹಿಸಬೇಕಾದ ಅಗತ್ಯವಿದೆ.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *