ಕಾಡು ಕೋಣ ದಾಳಿ.
1 min read
ಕಾಡುಕೋಣ ದಾಳಿಯಿಂದ ಮಹಿಳೆ ಸ್ಥಿತಿಗಂಭೀರ
ಮೂಡಿಗೆರೆ : ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತಿದ್ದ ಸರೋಜ(40)ಎಂಬ ಮಹಿಳೆಗೆ ಕಾಡುಕೋಣ ಗುದ್ದಿ ದೇಹದ ತೊಡೆಯ ಭಾಗ ಮತ್ತು ಹೊಟ್ಟೆಭಾಗಕ್ಕೆ ಗಂಭೀರ ಗಾಯಗಳಾಗಿವೆ.
ತಕ್ಷಣ ಇವರನ್ನು ಮೂಡಿಗೆರೆ ಎಂ ಜಿ ಎಂ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಾಳೂರಿನ ಸುತ್ತ ಮುತ್ತ ಕಾಡುಕೋಣಗಳ ಉಪಟಳ ಹೆಚ್ಚಾಗಿದ್ದು ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ಕೇಳಿಬರುತ್ತಿದೆ ಇಷ್ಟೆಲ್ಲ ನೆಡೆದರು ಸ್ಥಳಕ್ಕೆ ಆಗಮಿಸದ ಅರಣ್ಯಧಿಕಾರಿಗಳ ನಡೆಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸುತಿದ್ದಾರೆ…