लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಹಿಳಾ ದಿನಾಚರಣೆ ಪ್ರಯುಕ್ತ ಲೇಡಿ ಜೆಸಿ ವತಿಯಿಂದ ದಿನಾಂಕ 25-02-2024 ಭಾನುವಾರ ಸಾರ್ವಜನಿಕ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಥ್ರೋಬಾಲ್, ಹಗ್ಗ ಜಗ್ಗಾಟ, ಗುಂಡು ಎಸೆತ, ಮ್ಯೂಸಿಕಲ್ ಚೇರ್, ಸ್ಲೋ ಸ್ಕೂಟಿ ರೇಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮೂಡಿಗೆರೆ ತಾಲೂಕಿನ ಹಲವಾರು ತಂಡಗಳು ಭಾಗವಹಿಸಿದ್ದವು, ಮೂಡಿಗೆರೆಯ ಕಾಫಿನಾಡು ಒಕ್ಕಲಿಗರ ಸಂಘ, ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯ ತಂಡ, ಕಣಚೂ ರಿನ ಶ್ರಿದುರ್ಗಿ ತಂಡ, ಹಳಿಕೆ ತಂಡ, ಆಂಜನೇಯ ತಂಡ ಜನ್ನಾಪುರ, ಹೀಗೆ ಹಲವು ತಂಡಗಳು ಭಾಗವಹಿಸಿದ್ದವು. ಥ್ರೋಬಾಲ್ ಸ್ಪರ್ದೆಯಲ್ಲಿ ಮೂಡಿಗೆರೆಯ ಮಹಿಳಾ ಕಾಫಿನಾಡು ಒಕ್ಕಲಿಗರ ಸಂಘ ಪ್ರಥಮ, ಹಾಗೂ ಎಂಜಿಎಂ ಆಸ್ಪತ್ರೆಯ ತಂಡ ದ್ವೀತಿಯ ಹಾಗು ಹಗ್ಗ ಜಗ್ಗಾಟ ಸ್ಪರ್ದೆಯಲ್ಲಿ ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡವು.ಮೂಡಿಗೆರೆ ಜೆಸಿ ಸಂಸ್ಥೆಯ ಅಧ್ಯಕ್ಷರಾದ ಸುಪ್ರೀತ್ ಕಾರ್ಬೈಲ್, ಹಾಗು ಲೇಡಿ ಜೆಸಿ ಸಂಸ್ಥೆಯ ಅಧ್ಯಕ್ಷರಾದ ದಿವ್ಯ ಸುಪ್ರೀತ್ ಉಪಸ್ಥಿತರಿದ್ದರು. ಹಾಗು ಜೆಸಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು. ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ದಿನಾಂಕ 09-03-2024 ಶನಿವಾರ ನಡೆಯಲಿರುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

About Author

Leave a Reply

Your email address will not be published. Required fields are marked *