AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಜಾಲ್ ನ ಅಶ್ಫಾಕ್ ಯಾನೆ ಜುಟ್ಟು ಅಶ್ಫಾಕ್(27) ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್ ಇರ್ಫಾನ್ (26) ಬಂಧಿತ ಆರೋಪಿಗಳು.

ಜನವರಿ 01 ರಂದು ಪಡೀಲ್ ರೈಲ್ವೆ ಬ್ರಿಡ್ಜಿನಿಂದ ಸರಿಪಳ್ಳಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಸ್ಕೂಟರಿನಲ್ಲಿ ಮಾದಕ ವಸ್ತುವಾದ MDMA ಅನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿತ್ತು.ಸ್ಥಳಕ್ಕೆ ಪೋಲಿಸ್ ನಿರೀಕ್ಷಕರು ಮತ್ತು ಪಿಎಸ್ಐ ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 19 ಗ್ರಾಂ MDMA ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ.ಇವುಗಳ ಒಟ್ಟು ಮೌಲ್ಯ ರೂ 1,92,800/- ಎಂದು ಅಂದಾಜಿಸಲಾಗಿದೆ.

ಆರೋಪಿ ಜುಟ್ಟು ಅಶ್ಫಾಕ್ ಮೇಲೆ ಮಂಗಳೂರು ನಗರದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಕಂಕನಾಡಿ ನಗರ ಪೊಲೀಸ್ ಠಾಣೆ,ಉಳ್ಳಾಲ ಪೊಲೀಸ್ ಠಾಣೆ,ಸುರತ್ಕಲ್ ಪೊಲೀಸ್,ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ ದರೋಡೆ ಸುಲಿಗೆ ದೊಂಬಿಯಂತಹ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತವೆ.ಆರೋಪಿ ಉಮ್ಮರ್ ಫಾರೂಕ್ ಇರ್ಫಾನ್ ನ ಮೇಲೆ ಮಂಗಳೂರು ದಕ್ಷಿಣ,ಮಂಗಳೂರು ಗ್ರಾಮಾಂತರ,ಉಳ್ಳಾಲ ಪೊಲೀಸ್ ಠಾಣೆ,ಮೂಡಬಿದ್ರೆ ಪೊಲೀಸ್ ಠಾಣೆ,ಬರ್ಕೆ ಪೊಲೀಸ್ ಠಾಣೆ,ಕೊಣಾಜೆ ಪೊಲೀಸ್ ಠಾಣೆ ಸುರತ್ಕಲ್ ಪೊಲೀಸ್ ಠಾಣೆ,ಕಾರ್ಕಳ ನಗರ ಪೊಲೀಸ್ ಠಾಣೆ, ಶಿರ್ವ ಪೊಲೀಸ್ ಠಾಣೆ,ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ,ಮಂಗಳೂರು ಉತ್ತರ ಪೊಲೀಸ್ ಠಾಣೆ,ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಆರೋಪಿತನ ವಿರುದ್ಧ ಕೊಲೆಯತ್ನ, ದರೋಡೆ,ಸುಲಿಗೆ,ಸರಗಳ್ಳತನ, ದೊಂಬಿ,ವಾಹನ ಕಳ್ಳತನದಂತಹ ಒಟ್ಟು 25 ಪ್ರಕರಣಗಳು ದಾಖಲಾಗಿವೆ.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *