“ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇಸಿ ಕಥಾಕಮ್ಮಟ.”
1 min read
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ವೀರಲೋಕ ಬುಕ್ಸ್ ಬೆಂಗಳೂರು,ಸಂಸ್ಕೃತಿ ಪ್ರತಿಷ್ಠಾನ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ದೇಸಿ ಕಥಾಕಮ್ಮಟ ಕಾರ್ಯಕ್ರಮವು ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಜೆ.ಪಿ.ಕೃಷ್ಣೇಗೌಡ ನೆರವೆರಿಸಿದರು.ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ನಗರಸಭಾಧ್ಯಕ್ಷರಾದ ವರಸಿದ್ಧಿವೇಣುಗೊಪಾಲ್,ಸಾಹಿತಿಗಳಾದ ಡಾ.ರಾಜಪ್ಪದಳವಾಯಿ,ಶ್ರಿಮತಿಡಿ.ನಳಿನಿ,ಬಿ.ಅರ್.ಜಗದೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸೂರಿಶ್ರಿನಿವಾಸ್ ವಹಿಸಿದ್ದರು.


ಜಿಲ್ಲೆಯ ಅನೇಕ ಕಡೆಯಿಂದ ಬರಹಗಾರರು ಭಾಗವಹಿಸಿದ್ದರು.ಎರಡು ದಿನ ನಡೆಯುವ ಜಿಲ್ಲಾಮಟ್ಟದ ದೇಸಿ ಕಥಾ ಕಮ್ಮಟಕ್ಕೆ ನೂರಾರು ಜನ ಸಾಹಿತ್ಯಾಸಕ್ತರು ಆಗಮಿಸಲಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






