“ಅಂಗವಿಕಲರ ಮಾಸಿಕ ವೇತನ ಹೆಚ್ಚಿಸಬೇಕು : ಕಲ್ಮನೆ ಮಂಜುನಾಥ್.”
1 min read
ದಿನಾಂಕ 04/12/2023ರ ಸೋಮವಾರದಂದು ವಿಶ್ವ ಅಂಗವಿಕಲರ ದಿನಾಚರಣೆಗೆ ಶುಭಾಶಯ ಕೋರುತ್ತಾ ಅಂಗವಿಕಲ ಮಾಸಿಕ ವೇತನ ಹೆಚ್ಚಿಸಬೇಕೆಂದು ವಾಹಿನಿಯ ಮೂಲಕ ಸರ್ಕಾರಕ್ಕೆ ಕಲ್ಮನೆ ಮಂಜುನಾಥ್ ಮನವಿ ಮಾಡಿದ್ದಾರೆ.
ಸರ್ಕಾರವು ಸರ್ಕಾರಿ ನೌಕರರ ಮಾಸಿಕ ಸಂಬಳದಲ್ಲಿ ಹೆಚ್ಚಳ ಮಾಡುತ್ತಿದೆ,ಇನ್ನಿತರ ಉದ್ಯೋಗಗಳ ನೌಕರರಿಗೆ ವೇತನ ಹೆಚ್ಚಳ ಮಾಡುತ್ತಿದೆ ಆದರೆ ಅಂಗವಿಕಲರ ಮಾಸಿಕ ವೇತನವು 1200ರೂಗಳಷ್ಟು ಎಲ್ಲಾ ವಿಕಲಚೇತನರಿಗೆ ಲಭಿಸುತ್ತಿದೆ ಇದು ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ವಿಕಲಚೇತನರಿಗೆ ಸಾಕಾಗುವುದಿಲ್ಲ.ಅನೇಕ ವಿಕಲಚೇತನರ ಮಾಸಾಶನವು ಸಮರ್ಪಕವಾಗಿ ದೊರೆಯುತ್ತಿಲ್ಲ. ಆದರೆ ಅಂಗವಿಕಲರ ಮಾಸಾಶನವು ಇದುವರೆಗೂ 1200ರೂಗಳವರೆಗೆ ಮಾತ್ರ ಹೆಚ್ಚಳವಾಗಿದೆ. ಇನ್ನೂ ಸ್ವಲ್ಪ ಮಟ್ಟಿಗೆ ಹೆಚ್ಚಳವಾದರೆ ಎಲ್ಲಾ ಅಂಗವಿಕಲರಿಗೆ ಸರ್ಕಾರವು ಸಹಾಯ ಮಾಡಿದಂತಾಗುತ್ತದೆ ಜೊತೆಗೆ ಅಂಗವಿಕಲರ ಮೇಲೆ ಕರುಣೆ ತೋರಿದಂತಾಗುತ್ತದೆ ಇದರಿಂದ ಅಂಗವಿಕಲರಿಗೆ ಸ್ವಲ್ಪ ಮಟ್ಟಿಗೆ ಸಹಾಯವಾದರೂ ಆಗುತ್ತದೆ ಸರ್ಕಾರವು ಈ ಕುರಿತು ಗಮನಹರಿಸಬೇಕು ಎಂದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.