“ಎಲೈಟ್ ಮೈಂಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಚಿನ್ನಿಗ – ಜನ್ನಾಪುರದಲ್ಲಿ ವಿಜ್ಞಾನ ವಸ್ತು ಪ್ರದರ್ಶನ.”
1 min read
ಎಲೈಟ್ ಮೈಂಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಚಿನ್ನಿಗ – ಜನ್ನಾಪುರ ಇವರ ವತಿಯಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಬೃಂದಾ ಅಶೋಕ್ ಮತ್ತು ಕಾರ್ಯದರ್ಶಿಗಳಾದ ಶ್ರೀಯುತ ನಾಗದೇವ್ ಮತ್ತು ಪೋಷಕರು ಹಾಗೂ ಶಿಕ್ಷಕರು ಸೇರಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ನಂತರ ಎಲೈಟ್ ಮೈಂಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಚಿನ್ನಿಗ – ಜನ್ನಾಪುರ ಶಾಲೆಯ 4ರಿಂದ 9ನೇ ತರಗತಿ ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ,ವಿಭಿನ್ನ ಶೈಲಿಯಲ್ಲಿ, ಸೃಜನಶೀಲತೆಯಾಗಿ ಹಾಗೂ ವರ್ಕಿಂಗ್ ಮಾಡೆಲ್ ಗಳನ್ನ ಮಾಡಲಾಗಿತ್ತು, ಅವುಗಳನ್ನ ವೀಕ್ಷಿಸುವ ಮೂಲಕ ಮಕ್ಕಳಿಗೆ ಪ್ರೆರೇಪಿಸಿದರು ಮತ್ತು ಉತ್ತೇಜನವನ್ನು ನೀಡಿದರು,ನಂತರ ಅಂಗಡಿ ಪ್ರೌಢ ಶಾಲೆ,ಚಿನ್ನಿಗ ಪ್ರೌಢ ಶಾಲೆ,ಹೊಯ್ಸಳ ಗೋಣಿಬೀಡು ಪ್ರೌಢ ಶಾಲೆ ಮತ್ತು ಚಿನ್ನಿಗ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಪೋಷಕರು ಎಲ್ಲಾ ಮಾಡೆಲ್ ಗಳನ್ನು ವೀಕ್ಷಿಸುವ ಮೂಲಕ ಕಾರ್ಯಕ್ರಮಕ್ಕೆ ಮೇರುಗನ್ನ ನೀಡಿದರು.
ಮಕ್ಕಳೆಲ್ಲರನ್ನು ವಿಜ್ಞಾನ ಶಿಕ್ಷಕರಾದ ಶ್ರೀಯುತ ವಿಜೇಂದ್ರ ಸಿದ್ಧತೆಯನ್ನು ಮಾಡಿದರು.ತೀರ್ಪುಗಾರರಾಗಿ ಮೋಕ್ಷಿತ್,ಜಮೀಲಾ ಮತ್ತು ವಿಜೇಂದ್ರ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಮಧುರ,ನಾಗೇಶ್ ವಿಜೇಂದ್ರ (ಗಣಿತ ಶಿಕ್ಷಕರು) ಮತ್ತು ವಾಹನ ಚಾಲಕರಾದ ಸುಲ್ತಾನ್,ರಮೇಶ್,ಚಂದ್ರು ಮತ್ತು ಸುರೇಶ್ ಹಾಗೂ ಸಿಬ್ಬಂದಿವರ್ಗದವರು ಮತ್ತು ಪೋಷಕರು ಹಾಜರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.