“ಹುಲಿ ಉಗುರು ಪತ್ತೆ : ಆರೋಪಿಗಳಿಬ್ಬರ ಸೆರೆ.”
1 min read
ಮೂಡಿಗೆರೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಉಗುರು ಪತ್ತೆಯಾಗಿರುವ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಭಾರತಿ ಬೈಲ್ ಸಮೀಪದ ಕುಂಡ್ರಾದ ಆರೋಪಿ ಸತೀಶ್ ಬಳಿ ಬೆಳ್ಳಿ ಸರದಲ್ಲಿ ಹುಲಿ ಉಗುರು ಪತ್ತೆಯಾಗಿದೆ.
ಮತ್ತೋರ್ವ ಆರೋಪಿ ಹುಲ್ಲೇಮನೆ ಕುಂದೂರಿನ ಕೆ.ಎಸ್.ರಂಜಿತ್ ರನ್ನು ಬಂಧಿಸಲಾಗಿದೆ.ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಹಾಗೂ ಮೂಢಿಗೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.
ಮೂಡಿಗೆರೆ ವಲಯ ಅರಣ್ಯ ಅಧಿಕಾರಿಗಳಾದ ಚರಣ್ ಕುಮಾರ್, ಆಲ್ದೂರು ವಲಯ ಅರಣ್ಯ ಅಧಿಕಾರಿ ಹರೀಶ್,ಮೂಡಿಗೆರೆ ಉಪ ವಲಯ ಅರಣ್ಯ ಅಧಿಕಾರಿಗಳಾದ ಶಿವಕುಮಾರ್,ಚೇತನ್ ಕುಮಾರ್,ಆರ್.ಹರೀಶ್,ಚೇತನ್ ಕುಮಾರ್,ಸುಮಂತ್ ಭಾಗವಹಿಸಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.