लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಪಟ್ಟಣದಲ್ಲಿ ಶ್ರೀ ದುರ್ಗಾದೇವಿ ಉತ್ಸವ ಅರಂಭಗೊಳ್ಳುವ ಮುನ್ನ ಗಣಪತಿ ಉತ್ಸವಕ್ಕೆ ಪಟ್ಟಣದಲ್ಲಿ ಹಾಕಿದ್ದ ಕೇಸರಿ ದ್ವಾರ ಸೇರಿದಂತೆ 37 ಭಗವತ್ ಧ್ವಜ ತೆರವುಗೊಳಿಸಲಾಗಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕ ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಪಿ.ಜಿ.ಅನುಕುಮಾರ್ ಹೇಳಿದರು.

ಅವರು ದಿನಾಂಕ 24/10/2023ರ ಸೋಮವಾರದಂದು ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ಗಣೇಶ ಉತ್ಸವ ಸಂದರ್ಭದಲ್ಲಿ ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಸರ್ವ ಪಕ್ಷದ ಮುಖಂಡರು ಸಭೆ ನಡೆಸಿ ಗಣೇಶ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಆ ಸಂದರ್ಭದಲ್ಲಿ ದುರ್ಗಾದೇವಿ ಉತ್ಸವವನ್ನು ಕೂಡ ಎಲ್ಲರೂ ಜಾತಿ,ಬೇಧ,ಭಾವ ಮರೆತು ಒಗ್ಗೂಡಿಕೊಂಡು ಆಚರಿಸಲು ನಿರ್ಧರಿಸಲಾಗಿತ್ತು. ಹಾಗಾಗಿ ಗಣೇಶ ಉತ್ಸವಕ್ಕೆ ಹಾಕಿದ್ದ ಕೇಸರಿಯ ಪ್ರವೇಶ ದ್ವಾರ ಸೇರಿದಂತೆ ಪಟ್ಟಣದಲ್ಲಿ ಹಾಕಿದ್ದ ಭಗವಧ್ವಜಗಳನ್ನು ತೆರವುಗೊಳಿಸದೇ ಸುಮಾರು 9 ದಿನ ಹಾಗೆಯೇ ಬಿಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಶ್ರೀ ದುರ್ಗಾದೇವಿ ಉತ್ಸವದ ಹಿಂದಿನ ದಿನ ಕೇಸರಿ ದ್ವಾರ ಮತ್ತು 37 ಭಗವಧ್ವಜ ತೆರವುಗೊಳಿಸಲಾಗಿದೆ. ಈ ಬಗ್ಗೆ ದುರ್ಗಾದೇವಿ ಸಮಿತಿಯವರು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಮಾತನಾಡಿ, ಸನಾತನ ಧರ್ಮ ಸಾರುವಂತೆ ಹಿಂದೂಗಳ ಎಲ್ಲಾ ಹಬ್ಬ, ಉತ್ಸವ ಆಚರಣೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ದುರ್ಗಾದೇವಿ ಉತ್ಸವ ನಡೆಯಬೇಕಿತ್ತು. ಆದರೆ ಈ ಉತ್ಸವ ಕೇವಲ ಕೆಲ ವ್ಯಕ್ತಿಗಳಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಭಗವಧ್ವಜ ಯಾವ ಪಕ್ಷದ ಧ್ವಜವಲ್ಲ. ಅದನ್ನು ತೆರವುಗೊಳಿಸಿರುವುದು ಖಂಡನೀಯ. ಇಂತಹ ಉತ್ಸವ ಇಂದೇ ಕೊನೆಯಾಗಬೇಕು. ಇದು ಹೀಗೆಯೇ ಮುಂದುವರೆದರೆ ಮುಂದಿನ ವರ್ಷ ಪಟ್ಟಣದಲ್ಲಿ ಇನ್ನೊಂದು ದುರ್ಗಾದೇವಿ ಉತ್ಸವ ಆಚರಿಸುವುದು ಅನಿವಾರ್ಯ ಎಂದು ಹೇಳಿದರು.

ಸಮಿತಿ ಸದಸ್ಯರಾದ ಪದ್ಮಣ್ಣ, ಸಂತೋಷ್ ಕುಮಾರ್, ಅಕ್ಷತ್‌ಪಟೇಲ್, ರಂಗನಾಥ್, ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸಹ ಸಂಚಾಲಕ ಕೆ.ಸಿ.ಸಂತೋಷ್, ಪ್ರಣಿತ್, ಕಿರಣ್ ಕಣಚೂರು ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed