लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಮಸ್ತ ನಾಡಿನ ಜನತೆಯು ಗೌರವಿಸುವಂತಹ ಧಾರ್ಮಿಕ ಪರಂಪರೆಗೆ ಒತ್ತು ಕೊಡುವಂತಹ ಹಬ್ಬ ನಾಡ ಹಬ್ಬ ದಸರಾ.

ಈ ಹಬ್ಬವನ್ನ ಸರ್ಕಾರಿ ಇಲಾಖೆಯು ಹಾಗೂ ಸರ್ವರೂ ಕೂಡ ಅಚರಿಸುವುದು ವಿಜಯದಶಮಿ ಹಬ್ಬದ ಮುನ್ನಾ ದಿನವಾದ ಅಯುಧ ಪೂಜೆಯ ದಿನ.

 

ಆದರೆ ಇಲ್ಲೊಂದು ಇಲಾಖೆಯು ಈ ಹಬ್ಬವನ್ನ 2 ದಿವಸ ಮುಂಚೆಯೇ ಆಚರಿಸಿ ಫೋಟೋ ಮತ್ತು ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ದಸರಾ ಹಬ್ಬಕ್ಕೆ ಅವಮಾನವನ್ನ ಮಾಡಿದ್ದಾರೆ, ಕೆಲಸದಲ್ಲಿ ಉಪಯೊಗಿಸುವ ಆಯುಧಗಳನ್ನು ಪೂಜಿಸುವುದು ವಾಡಿಕೆ.ಅಯುಧಗಳ ಯಾವುದೆ ಕುರುಹು ಇಲ್ಲ.ಆ ಇಲಾಖೆ ಯಾವುದೆಂದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ “ಮೆಸ್ಕಾಂ” ಇಲಾಖೆ.

ಈ ಇಲಾಖೆಯ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಧಾರ್ಮಿಕ ಬಂಧುಗಳು ಮನವಿಯನ್ನ ಮಾಡಿದ್ದಾರೆ.

 

ನಾಡಿನ ಜನರಿಗೆ,ರೈತರಿಗೆ ತೊಂದರೆಯಾಗುವಂತೆ ಹಬ್ಬದ ಸಂದರ್ಭದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಮೆಸ್ಕಾಂ ಇಲಾಖೆಯು ಆತುರಾತುರವಾಗಿ ಆಯುಧ ಪೂಜೆ ಮಾಡಿ ಕರೆಂಟ್ ಶಾಕ್ ನೀಡಿದೆ. ಆದರೆ ಇದರಲ್ಲಿ ಅಧಿಕಾರಿಗಳ ದೋಷವೋ ಅಥವಾ‌ ಸಂಬಂಧಪಟ್ಟ ಮೇಲಾಧಿಕಾರಿಗಳ ಲೋಪವೋ ಒಂದು ಗೊತ್ತಿಲ್ಲ. ಅಂದರೆ ಇವರಿಗೆ ರಜೆಯಲ್ಲಿ ಮೋಜು ಮಸ್ತಿ ಮಾಡಲು ಸಮಯ ಸಿಗುವುದಕ್ಕಾಗಿ ಆತುರವಾಗಿ ಆಯುಧ ಪೂಜೆ ಮಾಡಿದ್ದಾರೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed