“ಬಾಲಕಿಯರ ಬಾಲ್ ಬ್ಯಾಟ್ ಮಿಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಎಲೈಟ್ ಮೈಂಡ್ ಶಾಲೆಯ ವಿದ್ಯಾರ್ಥಿಗಳು.”
1 min read
ದಿನಾಂಕ 28/9/2023 ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ, ಚಿಕ್ಕಮಗಳೂರು ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂಡಿಗೆರೆ ತಾಲ್ಲೂಕಿನ ಎಲೀಟ್ ಮೈಂಡ್ಸ್ ಇಂಟರ್ ನ್ಯಾಷನಲ್ ಶಾಲೆ. ಚಿನ್ನಿಗ ಜನ್ನಾಪುರ.

ಈ ಶಾಲೆಯ ಬಾಲಕಿಯರ ಬಾಲ್ ಬ್ಯಾಟ್ ಮಿಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು, ಮೂಡಿಗೆರೆ ತಾಲ್ಲೂಕಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಹಾಗೆಯೇ ಮೂರು ಜನ ವಿದ್ಯಾರ್ಥಿಗಳಾದಂತಹ ಖುಷಿ ಎಚ್. ಎಸ್,ಸಚಿತಾ ಎಂ.ಎಸ್, ಜನನಿ ಜೆ.ಪಿ ಇವರುಗಳು ಮೈಸೂರು ವಿಭಾಗ ಮಟ್ಟಕ್ಕೆ ಚಿಕ್ಕಮಗಳೂರು ಜಿಲ್ಲೆಯಿಂದ ಆಯ್ಕೆ ಆಗಿರುತ್ತಾರೆ.
ಆಯ್ಕೆ ಆದಂತಹ ಹಾಗೂ ದ್ವಿತೀಯ ಸ್ಥಾನ ಪಡೆದಂತಹಾ ಎಲ್ಲಾ ಕ್ರೀಡಾಪಟುಗಳಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕ ವರ್ಗದವರು ಮತ್ತು ಮಕ್ಕಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.