“ರೋಟ್ರ್ಯಾಕ್ಟ್ ಪದವಿ ಸ್ವೀಕಾರ ಸಮಾರಂಭ.”
1 min read
ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ 15/09/2023ರ ಶುಕ್ರವಾರದಂದು ರೋಟರಿಯ ಅಂಗ ಸಂಸ್ಥೆಯಾದ ರೋಟ್ರಾಕ್ಟ್ ನ ಪದವಿ ಸ್ವೀಕಾರ ಸಮಾರಂಭ ನಡೆಯಿತು, ನೂತನ ಅಧ್ಯಕ್ಷರಾದ ಕಾರ್ತಿಕ್ ರವರಿಗೆ ರೋಟರಿ ಝೋನ್ 8.ರ ಅಸಿಸ್ಟೆಂಟ್ ಗವರ್ನರ್ ವಿನೋದ್ ಕುಮಾರ್ ಶೆಟ್ಟಿ ಅವರು ಪದವಿ ದೀಕ್ಷೆಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಯುರೇಕಾ ಅಕಾಡೆಮಿಯ ಅಧ್ಯಕ್ಷರು, ಈ ಹಿಂದೆ ರೋಟ್ರಾಕ್ಟನ ಡಿಸ್ಟ್ರಿಕ್ಟ್ ರೋಟ್ರಾಕ್ಟ್ ರೆಪ್ರೆಸೆಂಟೆಟಿವ್ ಆಗಿದ್ದಂತಹ Rtn. ದೀಪಕ್ ದೊಡ್ಡಯ್ಯನವರು ರೊಟ್ರಾಕ್ಟ್ ನ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಅವರಾದ ಡಾ. ನಾರಾಯಣ್ ಎಸ್.ಮಾವರ್ಕರ್ ಅವರು ಮಾತನಾಡಿ ರೋಟ್ರಾಕ್ಟ್ ಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿ ತಂಡಕ್ಕೆ ಸ್ಪೂರ್ತಿಯನ್ನು ತುಂಬಿದರು. ಸಭೆಯ ಅಧ್ಯಕ್ಷತೆಯನ್ನು ರೋಟರಿಯ ಅಧ್ಯಕ್ಷರಾದ Rtn. ತೇಜಸ್ವಿ ಕೆ. ಎಲ್.ಎಸ್. ವಹಿಸಿದ್ದು ಶಿಕ್ಷಣಕ್ಕೆ ಮೊದಲ ಆಧ್ಯತೆಯನ್ನು ನೀಡಿ ಬಿಡುವಿನ ಸಮಯದಲ್ಲಿ ರೋಟ್ರಾಕ್ಟ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ರೋಟರಿಯ ರೋಟ್ರಾಕ್ಟ್ ಕೋಆರ್ಡಿನೇಟರ್ ಆದಂತಹ Rtn. ಪ್ರದೀಪ್ ಕುಮಾರ್, ಝೋನ್ ೮ರ ZL Rtn. ಶೈಲೇಶ್, ಶ್ರೀಯುತ ನಾಗರಾಜ್, ಧನಂಜಯ್, ರೋಟರಿ ಕಾರ್ಯದರ್ಶಿ Rtn. ಸಚಿನ್.ಎಸ್, Rtn. ನರೇಂದ್ರ ಶೆಟ್ಟಿ, Rtn. ವಿಕಾಸ್ , ಡಾ. ಭರತ್ ಕುಮಾರ್, ರೋಟ್ರಾಕ್ಟ್ ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂ ಕಾಲೇಜಿನ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
🎙️ವರದಿ.🎙️
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




