“ಮೂಡಿಗೆರೆಯಲ್ಲಿ ನಿಷೇಧಿತ ಎಂ.ಡಿ.ಎಂ.ಎ ಮಾರಾಟ : ಇಬ್ಬರನ್ನು ಬಂಧಿಸಿದ ಪೊಲೀಸರು.”
1 min read
ನಿಷೇಧಿತ ಮಾದಕ ವಸ್ತುವಾದ ಮೀಥೈಲೀನ್ ಡಯಾಕ್ರಿ ಮೆಥಾಂಫೆಟಮೈನ್(ಎಂ.ಡಿ.ಎಂ.ಎ) ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಗುರುವಾರ ಬಂಧಿಸಿದ್ದಾರೆ.
ದಿನಾಂಕ 31/08/2023 ರಂದು ಮೂಡಿಗೆರೆ ಠಾಣಾ ವ್ಯಾಪ್ತಿಯ ಮೂಡಿಗೆರೆ ಪಟ್ಟಣದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಬೇಲೂರು ಕಡೆ ಹೋಗುವ ಹೆದ್ದಾರಿಯಿಂದ ಸರ್ವೋದಯ ನಗರಕ್ಕೆ ಹೋಗುವ ರಸ್ತೆಯ ತಿರುವಿನ ಸರ್ಕಲ್ ನಲ್ಲಿ ಸುಹಾನ್ ಬಿ.ಜಿ. ಬಿನ್ ಗಣೇಶ ವಾಸ ಹ್ಯಾಂಡ್ ಪೋಸ್ಟ್ ಮೂಡಿಗೆರೆ ಮತ್ತು ಶಿಯಾಬುದ್ದಿನ್ ಬಿನ್ ಅಬ್ದುಲ್ ರಹೀಂ ವಾಸ ಮಾರ್ಕೇಟ್ ರಸ್ತೆ ಮೂಡಿಗೆರೆ ಇವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಎಂ.ಡಿ.ಎಂ.ಎ. ಕ್ರಿಸ್ಟೇಲ್ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ನೀಡಿರುವ ಹೇಳಿಕೆಯಂತೆ ಮಾದಕ ವಸ್ತುವನ್ನು ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆ ವಾಸಿ ಅಮ್ಜದ್ ಖರಾರ್ ಎಂಬುವವನಿಂದ ಪಡೆದುಕೊಂಡು ಬಂದಿರುವುದಾಗಿ ತಿಳಿಸಿದ್ದು, ಅರೋಪಿತರು ಅಕ್ರಮವಾಗಿ ಹೊಂದಿದ್ದ 3000/- ರೂ ಬೆಲೆ ಬಾಳುವ 12 ಗ್ರಾಂ ತೂಕವಿರುವ ಎಂ.ಡಿ.ಎಂ.ಎ. ಕ್ರಿಸ್ಟೇಲ್ ಮಾದಕ ವಸ್ತುವನ್ನು ಮತ್ತು 2 ಮೊಬೈಲ್ ಗಳನ್ನುಅಮಾನತ್ತುಪಡಿಸಿಕೊಂಡು ಬಂದು ಅರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಈ ಕಾರ್ಯಚರಣೆಯಲ್ಲಿ ಸಿ.ಇ.ಎನ್. ಠಾಣಾ ಪಿ.ಐ. ರಘುನಾಥ ಎಸ್.ವಿ. ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




