“ಹೇ….ಯಪ್ಪಾ…. ಮೊದ್ಲು ನೆಟ್ಟಗೆ ಮಾತಾಡು… ಹೇ… ನೀನು ನೆಟ್ಟಗೆ ಮಾತಾಡಮ್ಮ..”
1 min read
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವೆ ವಾಕ್ಸಮರ ನಡೆದ ಘಟನೆ ಬೆಳಕಿಗೆ ಬಂದಿದೆ. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೊರಟಿದ್ದ 60 ಜನರು ಮಾತ್ರ ಪ್ರಯಾಣಿಸುವ ಸರ್ಕಾರಿ ಬಸ್ಸಿನಲ್ಲಿ ಸುಮಾರು 190 ಜನರನ್ನು ಹತ್ತಿಸಲಾಗಿತ್ತು ಆದರೆ ಬಸ್ಸಿನಲ್ಲಿದ್ದ ಮಹಿಳೆಯರು ಬಸ್ಸಿಗೆ ಇನ್ನು ಜನರನ್ನ ಹತ್ತಿಸುವಂತೆ ಕಂಡಕ್ಟರ್ ಗೆ ದುಂಬಾಲು ಬಿದ್ದಿದ್ದಾರೆ.

ಈ ಬಸ್ಸಿನಲ್ಲಿ ಜಾಗವಿಲ್ಲ ಬೇರೆ ಬಸ್ಸಿನಲ್ಲಿ ಬನ್ನಿ ಎಂದು ಹೇಳಿದ ಕಂಡಕ್ಟರ್ ಜೊತೆ ಕೈ ಕೈ ತೋರಿಸಿ ಹೇ….ಯಪ್ಪಾ…. ಮೊದ್ಲು ನೆಟ್ಟಗೆ ಮಾತಾಡು… ಹೇ… ನೀನು ನೆಟ್ಟಗೆ ಮಾತಾಡಮ್ಮ.. ಎಂದು ವಾಕ್ಸಮರ ನಡೆಸಿದ್ದಾರೆ.
ಮಹಿಳೆಯರೆಲ್ಲರೂ ಉತ್ತರ ಕರ್ನಾಟಕದಿಂದ ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ ಸೀಟ್ ಸಿಗದೆ ಅನೇಕ ಪುರುಷರು ಬಸ್ಸಿನ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






