“ಆತ್ಮಹತ್ಯೆಗೆ ಯತ್ನಿಸಿದ ಅಬ್ದುಲ್ ನಾಸಿರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ.”
1 min read
ಕಳೆದ ಕೆಲವು ದಿನಗಳ ಹಿಂದೆ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ..
ಲೈವ್ ವೀಡಿಯೋ ಮಾಡಿ ಕೃತ್ಯಕ್ಕೆ ಕಾರಣ ಹೇಳಿರುವ ನಾಸಿರ್ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ, ಅಲ್ಲಿನ ಕುಟುಂಬದ ಹುಡುಗಿಯೊಂದಿಗೆ ಸಂಬಂಧ ಇದೆಯೆಂದು ಹೇಳಿ ಅದ್ರಾಮ ಅವರು ಮನೆಗೆ ಕರೆದು ನಾಲ್ವರ ಜೊತೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು ನನಗೆ ಅಲ್ಲಿನ ಯಾವುದೇ ಹುಡುಗಿ ಜೊತೆಗೂ ಸಂಬಂಧ ಇಲ್ಲ ಎಂದು ಖುದ್ದಾಗಿ ಲೈವ್ ವೀಡಿಯೋ ಮಾಡಿ ತಿಳಿಸಿದ್ದರು..
ಅವರು ಹೇಳಿರುವ ಹುಡುಗಿಯ ಗಂಡನೇ ಈ ಕಾರಿನಲ್ಲಿದ್ದಾನೆ ಎಂದು ಹೇಳಿ ಜೊತೆಗಿದ್ದ ನಾಲ್ವರನ್ನ ತೋರಿಸಿ, ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ. ಎಂದು ಈ ಹಿಂದೆ ಹೇಳಿದ್ದರು. ನಾನು ಈಗ ಪುತ್ತೂರಿಗೆ ಹೋಗಿ ಆತ್ಮಹತ್ಯೆ ಮಾಡುತ್ತೇನೆ ಎಂದು ಕೆಲವು ದಿನಗಳ ಹಿಂದೆ ಹೇಳಿ ವೀಡಿಯೋ ಮಾಡಿ ಕಟ್ ಮಾಡಿದ್ದಾನೆ. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಆತನನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು ಚಿಂತಾಜನಕ ಸ್ಥಿತಿಯಲ್ಲಿದ್ದ ನಾಸಿರ್ ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.