“76ನೇ ಸ್ವಾತಂತ್ರ್ಯ ದಿನಾಚರಣೆ.”
1 min read
ದಿನಾಂಕ 15/08/2023ರ ಮಂಗಳವಾರದಂದು ಬೆಳಿಗ್ಗೆ 7 ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ,ಚಕ್ಕಮಕ್ಕಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು.



ಜುಮ್ಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಧ್ವಜಾರೋಹಣ ನೆರವೇರಿಸಿ ದೇಶ ಪ್ರೇಮವು ಇಸ್ಲಾಮಿನ ಒಂದು ಭಾಗ ಇದನ್ನು ನಮ್ಮ ಮಕ್ಕಳಿಗೆ ತಿಳಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯವಾಗಿದೆ ಜೊತೆಗೆ ನಾವುಗಳು ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ನಝೀರ್,ಸದಸ್ಯರಾದ ಅಬುಬಕ್ಕರ್,ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಬಿ.ಎಂ.ಯಾಸೀರ್,ಜೊತೆ ಕಾರ್ಯದರ್ಶಿ ಮನ್ಸೂರ್,ಎಸ್.ಕೆ.ಎಸ್.ಬಿ.ವಿ.ಇದರ ಅಧ್ಯಕ್ಷರಾದ ನಯೀಮ್, ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಜಮಾಲುದ್ದೀನ್ ಫೈಝಿ,ಮುಅಲ್ಲಿಮರಾದ ಸಫ್ವಾನ್ ಫೈಝಿ, ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ ಇದರ ಪ್ರಾಂಶುಪಾಲರಾದ ಸಿನಾನ್ ಫೈಝಿ ಖಲಂದರಿ ಮತ್ತು ಝೈದ್ ಫೈಝಿ ಖಲಂದರಿ ಹಾಗೂ ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕೊನೆಯಲ್ಲಿ ಸಿಹಿ ವಿತರಿಸಲಾಯಿತು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.