“ಅಮೇರಿಕಾದಲ್ಲಿ ಮೇಜರ್ ಲೀಗ್ ಟಿ-20 : ಮಿಂಚಿದ ಕಾಫಿನಾಡಿನ ಯುವ ಬೌಲರ್ ನಾಸ್ತುಶ್.”
1 min read
ಐಪಿಎಲ್ ಮಾದರಿಯಲ್ಲಿ ಅಮೇರಿಕಾದಲ್ಲಿ ನಡೆದ ಮೇಜರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿಕೋಲಸ್ ಪೂರಣ್ ನಾಯಕತ್ವದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡವು ಪೈನಲ್ ಹಣಾಹಣಿಯಲ್ಲಿ ಸಿಯಾಟಲ್ ವೋರ್ಕಾಸ್ ತಂಡವನ್ನು 7 ವಿಕೆಟ್ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ವಿಶೇಷವೆಂದರೆ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡದ ಆಟಗಾರ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಮೂಲದ ನಾಸ್ತುಶ್ ಕೆಂಜಿಗೆ ಟೂರ್ನಮೆಂಟ್ ನಲ್ಲಿ ಬೆಸ್ಟ್ ಎಕಾನಮಿಕ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಮುಂಬೈ ಇಂಡಿಯನ್ ನ್ಯೂಯಾರ್ಕ್ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರದೀಪ್ ಕೆಂಜಿಗೆ, ಶೃತಿಕೀರ್ತಿ ದಂಪತಿಗಳ ಪುತ್ರರಾದ ನಾಸ್ತುಶ್ ಅಮೇರಿಕಾದಲ್ಲಿ ನೆಲೆಸಿದ್ದು, ಪ್ರಸ್ತುತ ಅಮೇರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಮುಖ ಅಲ್ರೌಂಡರ್ ಆಗಿದ್ದಾರೆ.

ಇದೀಗ ಮೇಜರ್ ಲೀಗ್ ನಲ್ಲಿ ತನ್ನ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಮುಂಬೈ ಇಂಡಿಯನ್ ತಂಡದ ನೀತಾ ಅಂಬಾನಿ ನಾಸ್ತುಶ್ ಅವರ ಸಾಧೆನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟು ಆರು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಐಪಿಎಲ್ ಪ್ರಾಂಚೈಸಿ ನೀತಾ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡವು ನ್ಯೂಯಾರ್ಕ್ ತಂಡಕ್ಕೆ ಪ್ರಾಯೋಜಕತ್ವ ವಹಿಸಿತ್ತು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.