“ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ನೂತನ ಆಡಳಿತ ವೈದ್ಯಾಧಿಕಾರಿ ನೇಮಕ.”
1 min read
ಮಾನ್ಯ ಭರವಸೆ ಶಾಸಕರು ಪ್ರಾಮಾಣಿಕ ನೌಕರರ ಮತ್ತು ವೈದ್ಯರ ಮನವಿಗೆ ಸ್ಪಂದಿಸಿ ನೂತನ ಆಡಳಿತ ವೈದ್ಯಾಧಿಕಾರಿಗಳನ್ನು ಕೊಟ್ಟಂತಹ
ಮಾನ್ಯ ಶಾಸಕರಿಗೆ ನೌಕರರು ಕೃತಜ್ಞತೆ ಸಲ್ಲಿಸಿದರು.
ಈ ಹಿಂದೆ ಇಲ್ಲಿಯೇ
ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನೌಕರರ ಪ್ರೀತಿ ಪಾತ್ರರಾದ ಮತ್ತು
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಪ್ರಿಯಾಂಕ ಪ್ರಭಾಕರ್ ರವರನ್ನು ಹೃದಯಪೂರ್ವಕವಾಗಿ ಸಿಬ್ಬಂದಿ ವರ್ಗದವರು ಸ್ವಾಗತವನ್ನು ಬಯಸುವ ಈ ಸಂದರ್ಭದಲ್ಲಿ ಸಂಭ್ರಮಾಚರಣೆಯನ್ನು ಆಚರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಹೆಚ್ಚು ರೋಗಿಗಳು ಈ ಆಸ್ಪತ್ರೆಗೆ ಬರುವುದರಿಂದ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಈ ಭಾಗದಲ್ಲಿ ಇರುವುದರಿಂದ ಅಪಘಾತಗಳ ಸಂಖ್ಯೆ ಜಾಸ್ತಿ .
ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ತೆಗಳು ಇದ್ದು ಸರಿಯಾಗಿ ನಿರ್ವಾಹಣೆ ಇಲ್ಲ ಎಂದು ಸಾರ್ವಜನಿಕರು ದೂರುತಿದ್ದಾರೆ.
ಅನೇಕ ಯಂತ್ರಗಳ ಅಪರೆಟರ್ ಇಲ್ಲದಿರುವುದು ವಿಪರ್ಯಾಸವೆ ಸರಿ.
ಆಡಳಿತ ವೈದ್ಯಾಧಿಕಾರಿಗಳು ಭರವಸೆ ಶಾಸಕಿಯವರ ಜೊತೆಗೆ ಸೇರಿ ಉತ್ತಮ ಕಾರ್ಯ ಮಾಡಲಿ ಎಂಬುದೆ ನಮ್ಮ ಹಾರೈಕೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.