16ವರ್ಷದ ಬಾಲಕನಿಗೆ 25.ಸಾವಿರ ರೂ ದಂಡ.
1 min read
ದಿನಾಂಕ 19/07/2023ರ ಬುಧವಾರದಂದು ಭದ್ರಾವತಿಯ ಹುತ್ತಾ ಕಾಲೋನಿಯ ಬಳಿ ವಾಹನ ತಪಾಸಣೆ ಮಾಡುವಾಗ 16 ವರ್ಷದ ಅಪ್ರಾಪ್ತ ಬಾಲಕನೊಬ್ಬನು ವಾಹನ ಚಾಲನಾ ಪರವಾನಿಗೆ ಇಲ್ಲದೆ ಕೆಎ-14 ಇಕೆ-2461 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು,

ಅಪ್ರಾಪ್ತ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಅಪ್ರಾಪ್ತ ಬಾಲಕನ ತಂದೆ ಶ್ರೀಕಾಂತ್, 45 ವರ್ಷ, ವಾಸ ಜನ್ನಾಪುರ ಭದ್ರಾವತಿ ಟೌನ್ ಈತನ ವಿರುದ್ಧ ಲಘು ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದು, ಜೆಎಂಎಫ್ಸಿ ನ್ಯಾಯಾಲಯ ಭದ್ರಾವತಿಯ ಮಾನ್ಯ 16ವರ್ಷದ ಬಾಲಕನಿಗೆ 25.ಸಾವಿರ ರೂ ದಂಡ. ದ್ವಿ ಚಕ್ರ ವಾಹನದ ಮಾಲೀಕರಾದ ಶ್ರೀಕಾಂತ್ ಈತನಿಗೆ ರೂ 25,000/- ದಂಡ ವಿಧಿಸಿರುತ್ತಾರೆ.
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ರವರು ಠಾಣಾ ವ್ಯಾಪ್ತಿಯ ದಾಖಲಿಸಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.