लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಂಗಳೂರು - ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ 73ರ ಉಜಿರೆಯ ಕೆಳಗಿನ ಪೇಟೆಯಲ್ಲಿ ಸೋಮವಾರ ಸಂಜೆ ರಸ್ತೆಯಲ್ಲೇ ಮಳೆನೀರು ಹರಿದ ಪರಿಣಾಮ ಅಕ್ಷರಶಃ ನದಿಯಂತೆ ಕಂಡುಬಂದಿತು.

ಸೋಮವಾರ ಸಂಜೆ ಉಜಿರೆ ಪರಿಸರ ದಲ್ಲಿ ಸುರಿದ ಭಾರೀ ಮಳೆಗೆ ಕೆಳಗಿನ ಪೇಟೆಯಲ್ಲಿ ನೀರು ರಸ್ತೆಯಲ್ಲಿ ಎರಡು ಅಡಿಗಿಂತ ಅಧಿಕ ಹರಿದು ಸಮೀಪದ ಅಂಗಡಿಗಳಿಗೆ ನುಗ್ಗಿತಲ್ಲದೆ, ದ್ವಿಚಕ್ರ ವಾಹನ, ಕಾರುಗಳ ಸಹಿತ ಸಣ್ಣಪುಟ್ಟ ವಾಹನಗಳಿಗೆ, ಪಾದಚಾರಿಗಳಿಗೆ ಸಂಚಾರ ತ್ರಾಸದಾಯಕವಾಗಿದೆ. ಜುಲೈ14ರಂದು ಹಾಗೂ ಕಳೆದ ವಾರ ಇಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜೂನ್‌ನಲ್ಲಿ ನೀರು ರಸ್ತೆಯಲ್ಲಿ ಹರಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಚರಂಡಿಗಳನ್ನು ದುರಸ್ತಿ ಮಾಡಲಾಗಿತ್ತು. ಆದರೆ ಇದಕ್ಕೆ ಮೂಲ ಕಾರಣವೇನೆಂಬುದನ್ನು ಅಧಿಕಾರಿಗಳು ಪರಿಶೀಲಿಸದೆ ಜನರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ; ಪ್ರತೀ ಮಳೆಗಾಲದಲ್ಲಿ ಸಮಸ್ಯೆ ಮರುಕಳಿಸುತ್ತಿದ್ದರೂ ಕೂಡ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ, ಗಿಡಗಂಟಿ ತೆರವುಗೊಳಿಸ ದಿರುವುದು ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬರಹ ಕೃಪೆ.

ಶಾಹಿನ್.ಉಜಿರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *