“ದಿಢೀರ್ ಪ್ರತ್ಯಕ್ಷವಾದ ಒಂಟಿ ಕಾಡುಕೋಣ.”
1 min read
ದಿನಾಂಕ 15/07/2023 ಶನಿವಾರದಂದು ಬೆಳ್ಳಂಬೆಳಗ್ಗೆ ಮೂಡಿಗೆರೆ ಹಾಗೂ ಚಿಕ್ಕಮಗಳೂರು ಮಾರ್ಗವಾದ ಕುದುರೆಗುಂಡಿ ಎಸ್ಟೇಟ್ ದಾರಿಮದ್ಯೇ ಒಂಟಿ ಕಾಡುಕೋಣವೊಂದು ಮೇಯುತ್ತಿದ್ದು ವಾಹನಗಳನ್ನು ಕಂಡ ಕೂಡಲೆ ಕಾಫಿ ತೋಟದ ಒಳ ಜಿಗಿದಿದೆ.


ಪ್ರಯಾಣಿಕರು ದಿಢೀರ್ ಪ್ರತ್ಯಕ್ಷವಾದ ಕಾಡಿನ ಅತಿಥಿಯನ್ನು ಕಂಡು ನಿಬ್ಬೆರಗದಾರು, ಈ ಕುದುರೆ ಗುಂಡಿ ಬಳಿ ಹೀಗೆ ಕಾಡು ಪ್ರಾಣಿಗಳು ಕಂಡು ಬರುವುದು ಹೊಸ ವಿಷಯವೆನಲ್ಲ ಆದರೂ ಒಬ್ಬಂಟಿಯಾಗಿ ಪ್ರಯಾಣಿಸುವಾಗ ಕೆಲವೊಮ್ಮೆ ಎಚ್ಚರ ವಹಿಸಬೇಕು ಹಾಗೂ ಕೆಲ ಪ್ರಾಣಿಗಳು ದಾರಿಯಲ್ಲಿ ಅಡ್ಡಾಡುತ್ತಿರುತ್ತವೆ ಪ್ರಯಾಣಿಕರು ನಿಧಾನವಾಗಿ ಚಲಿಸಬೇಕು ,ಪ್ರಾಣಿ ಸಂಕುಲಗಳಿಗೂ ನಮ್ಮಷ್ಟೇ ಬದುಕುವ ಹಕ್ಕಿದೆ ಇನ್ನು ಮಳೆಗಾಲವಾಗಿರುವ ಕಾರಣ ಈ ದಾರಿಯಲ್ಲಿ ಮರಗಳು ಬೀಳುವುದು ಸಹಜ ಆದರಿಂದ ಪ್ರಯಾಣಿಕರು ನಿಧಾನವಾಗಿ ಜಾಗೃತರಾಗಿ ವಾಹನ ಚಲಾಯಿಸಬೇಕೆಂದು ನಮ್ಮ ವಿನಂತಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.












