लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಅಪ್ಪು ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಟೈ ಮತ್ತು ಬೆಲ್ಟ್ ವಿತರಣೆ.”

1 min read


ದಿನಾಂಕ 14/07/2023ರ ಶುಕ್ರವಾರದಂದು
ಅಪ್ಪು ಅಭಿಮಾನಿ ಬಳಗದ ವತಿಯಿಂದ ಮಾಕೋನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಟೈ & ಬೆಲ್ಟ್ ವಿತರಿಸಲಾಯಿತು.

ನಂತರ ನಿರೂಪಕಿ ವಿಜಯಲಕ್ಷ್ಮಿರವರು ಅಪ್ಪು ಅಭಿಮಾನಿ ಬಳಗ ಬೆಳೆದು ಬಂದ ರೀತಿ ಹಾಗೂ ಇಂದಿಗೆ 1170 ಮಕ್ಕಳಿಗೆ ಟೈ ಬೆಲ್ಟ್ ವಿತರಿಸಿರುವ ಸಂಭ್ರಮದ ಬಗ್ಗೆ ವಿವರಿಸಿದರು ಹಾಗೂ ಸರಕಾರಿ ಶಾಲೆಗಳ ಅಭಿವೃದ್ದಿಗೆ ಮುಂದಿನ ಪೀಳಿಗೆಯು ಶ್ರಮಿಸಬೇಕು ಎಂದು ಪ್ರಾಸ್ತಾವಿಕ ನುಡಿಗಳನ್ನು ನುಡಿದರು ನಂತರ ಶಾಲಾ ಮುಖ್ಯೋಪಾಧ್ಯಾಯರು ಅಪ್ಪುರವರ ಸಾಧನೆಗಳನ್ನು ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿದರು ನಂತರ ಅಧ್ಯಕ್ಷರಾದ ರಮೇಶ್ ಎಸ್ ಇವರು ಅಪ್ಪು ಅಭಿಮಾನಿ ಬಳಗದ ಮುಂದಿನ ಕಾರ್ಯಕ್ರಮ ಹಾಗೂ ಟೈ ಬೆಲ್ಟ್ ಧರಿಸುವುದರ ಮಾಹಿತಿ ನೀಡಿ ತಾನು ತಿನ್ನುವ ಅನ್ನದಲ್ಲಿ ಒಂದು ತುತ್ತು ಸಮಾಜದ ಒಳ್ಳೆ ಕೆಲಸಗಳಿಗೆ ಮೀಸಲಿಡಲು ತಿಳಿಸಿಕೊಟ್ಟರು.

ನಂತರ ಸನ್ಮಾನಿತರಾದ ಅಪ್ಪು ಅಭಿಮಾನಿ ಬಳಗದ ಖಜಾಂಚಿಗಳಾದ ಶ್ರೀನಿವಾಸ್ ರವರು ತಾನು ಓದಿ ಬೆಳೆದಂತಹ ಶಾಲೆಯನ್ನು ಅಭಿವೃದ್ದಿ ಪಡಿಸಲು ತನಗೆ ಬಳಗದಲ್ಲಿ ಸಿಕ್ಕ ಅವಕಾಶ ಹಾಗೂ ಬೆಂಬಲಕ್ಕೆ ಶ್ಲಾಘಿಸಿ ಸಂತೊಷ ವ್ಯಕ್ತಪಡಿಸಿದರು..
ಈ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ಎಸ್. ರಮೇಶ್, ಖಜಾಂಚಿ ಶ್ರೀನಿವಾಸ್, ಸದಸ್ಯರಾದ ವಿಜಯಲಕ್ಷ್ಮಿ ಎಂ ಬಿ , ಸದಸ್ಯರಾದ ಸುನಿಲ್ ಹಾಗೂ ಅನುಶ್ ರವರು ಹಾಜರಿದ್ದರು ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಟೈ & ಬೆಲ್ಟ್ ವಿತರಿಸಿ ಸಿಹಿ ಹಂಚಲಾಯಿತು , ಈ ಕಾರ್ಯಕ್ರಮದ ದಾನಿಗಳದ ಶ್ರೀನಿವಾಸ್ ರವರಿಗೆ ಬಳಗ ಹಾಗೂ ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕವೃಂದ ಹಾಗೂ ಎಸ್.ಡಿ.ಎಮ್.ಸಿ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು , ಈ ಕಾರ್ಯಕ್ರಮಕ್ಕೆ ಪರೋಕ್ಷವಾಗಿ ಸಹಕರಿಸಿದ ಉಪಾಧ್ಯಕ್ಷ ಸುಭೇಷ್, ಕಾರ್ಯದರ್ಶಿ ಅಶೋಕ್,ಸಹಕಾರ್ಯದರ್ಶಿ ಜಯಗೌಡ, ಕಿಶೋರ್ , ಸುಹಾನ,ನವೀನ್ ಕುಮಾರ್, ಆದಿ ಹಾಗೂ ಬಳಗದ ಎಲ್ಲ ಸದಸ್ಯರುಗಳಿಗೂ ಧನ್ಯವಾದಗಳನ್ನು ಅಪ್ಪು ಅಭಿಮಾನಿ ಬಳಗದ ವತಿಯಿಂದ ತಿಳಿಸಲಾಯಿತು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *