“…ಮಲೆನಾಡ ಗೊರಗ…”
1 min read
ಮಳೆಗಾಲದಲ್ಲಿ ನಮ್ಮ ಛತ್ರಿ. ಪ್ಲಾಸ್ಟಿಕ್ ಗಿಂತ ನಮ್ಮ ದೇಹವನ್ನು ಬೆಚ್ಚನೆ ಇಡುವ ಗೊರಗ ಇಂದು ಮಾಯವಾಗಿವೆ.ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಪುಟ್ಟಯ್ಯ.ಊರಿನ ಹಿರಿಯರು. ಸುಮಾರು 94 ವರ್ಷ.
ಗೊರಗ ಮಾಡುವುದರಲ್ಲಿ ಪರಿಣಿತರಾಗಿದ್ದರು. ಇಂದಿಗೂ ನಮ್ಮೊಂದಿಗೆ ಇದ್ದಾರೆ.

ಗೊರಗ ಈವಾಗ ಮಾಡಲ್ಲ ಅವರ ಹತ್ತಿರ ಅಗುವುದಿಲ್ಲ.ವಯಸ್ಸು ಆಗಿದೆ. ಗೊರಗಕ್ಕೆ ಬೇಕಾದ ಮೂಲ ಸೌಕರ್ಯಗಳು ಇಗ ಇಲ್ಲಾದಾಗಿವೆ.ಯಾವುದೆ ಮಳೆ ಗಾಳಿಗೆ ಅಂಜಿದ ದಿನವೆ ಇಲ್ಲ.ಮಳೆಯೆ ಗೊರಗಕ್ಕೆ ಹೆದರುತಿದ್ದ ಕಾಲವದು.ವಾಟೆ ಬಾಸಿನಿಂದ ತಯಾರಿಸಿ,ಕೂಗಿನ ಎಲೆಯನ್ನು ಬಿಸಿ ನೀರಿನಲ್ಲಿ ಬೇಯಿಸಿ ಹೊದಿಸುತಿದ್ದರು.

ಮಕ್ಕಳಿಗೆ.ಮಹಿಳೆಯರಿಗೆ.ಪುರುಷರಿಗೆ ಬೇಕಾದ ಗೊರಗ ಮಾಡುತಿದ್ದರು.ತಲೆಗೆ ಗೊರಗ ಒತ್ತುತ್ತದೆಯೆಂದು ಸಣ್ಣ ಸಿಂಬೆಯನ್ನು ತಲೆಗೆ ಕಟ್ಟಿ ಕೊಳ್ಳುತಿದ್ದರು.ಗೊರಗದ ಸಂದಿಯಲ್ಲಿ ಬೀಡಿ ಕಟ್ಟು.ಬರಕಟ್ಟೆ ಅಳುಬು ಸಿಕ್ಕಿಸಿ ಇಡುತಿದ್ದರು.ಗೊರಗ ಇನ್ನು ನೆನಪು ಮಾತ್ರ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











