लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆದಿವಾಸಿ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ಮುಖಂಡನ ಮಾಲಿಕತ್ವದಲ್ಲಿರುವ ಅಕ್ರಮ ಆಸ್ತಿಯ ಭಾಗಗಳನ್ನು ಮಧ್ಯಪ್ರದೇಶ ಸರ್ಕಾರವು ದಿನಾಂಕ 05/07/2023ರಂದು ನೆಲಸಮಗೊಳಿಸಿದೆ.ಆದಿವಾಸಿ ಯುವಕನ ಮೇಲೆ ನಡೆಸಿದ ಅಮಾನುಷ ಕೃತ್ಯದಿಂದ ಆಡಳಿತರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ಕಠಿಣ ಕ್ರಮದ ಮೂಲಕ ಮುಜುಗರ ತಪ್ಪಿಸಲು ಪ್ರಯತ್ನಿಸಿದೆ.ಸ್ಥಳೀಯ ಬಿಜೆಪಿ ಶಾಸಕನ ಆಪ್ತ ಪ್ರವೇಶ್ ಶುಕ್ಲಾ ಎಂಬಾತ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿ ಬಿಜೆಪಿ ಹಾಗೂ ಆತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪೊಲೀಸರು ಆರೋಪಿ ಶುಕ್ಲಾನನ್ನು ಬಂಧಿಸಿದ್ದರು.ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಜೆಸಿಬಿ ವಾಹನದೊಂದಿಗೆ ಹಲವಾರು ಅಧಿಕಾರಿಗಳು ಪರ್ವೇಶ್ ಶುಕ್ಲಾ ಮನೆಗೆ ತಲುಪಿದ್ದು ಅಕ್ರಮ ಒತ್ತುವರಿ ಆರೋಪದ ಮೇಲೆ ಆತನ ಆಸ್ತಿಯ ಭಾಗಗಳನ್ನು ಕೆಡವಿದ್ದಾರೆ.ಈ ನಡುವೆ, ವೈರಲ್‌ ವಿಡಿಯೋ ನಕಲಿಯಾಗಿದೆ ಎಂದು ಹೇಳುವ ಪತ್ರಕ್ಕೆ ಬಲವಂತವಾಗಿ ಯುವಕನ ತಂದೆಯಿಂದ ಆರೋಪಿ ಸಹಿ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪತ್ರ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಆರೋಪಿಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *