“ಉಪ್ಪಿನಂಗಡಿಯ ಯುವಕನೋರ್ವ ದುಬೈನಲ್ಲಿ ಮೃತ್ಯು.”
1 min read
ದಕ್ಷಿಣ ಕನ್ನಡ ಜಿಲ್ಲೆಯ,ಉಪ್ಪಿನಂಗಡಿಯ ಯುವಕನೋರ್ವ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕುಪ್ಪೆಟ್ಟಿ ನಿವಾಸಿ ರಾಝಿಕ್ (24) ಮೃತ ಯುವಕ.
ವಿವಾಹಿತನಾಗಿರುವ ರಾಝಿಕ್ ಕಳೆದ ಬಾರಿ ದುಬೈನಿಂದ ಬಂದು ವಿವಾಹವಾಗಿ ಮತ್ತೆ ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದರು.ಇವರಿಗೆ ಪುಟ್ಟ ಮಗು ಕೂಡ ಇದೆ ಎನ್ನಲಾಗಿದೆ.
ಯುವಕನ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಬರಹ ಕೃಪೆ.
ಶಾಹಿನ್.ಉಜಿರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.