“ಉಚಿತ ಆರೋಗ್ಯ ತಪಾಸಣಾ ಶಿಬಿರ.”
1 min read
ದಿನಾಂಕ 28/06/2023ರಂದು ರೋಟರಿ ಸಂಸ್ಥೆ ಮೂಡಿಗೆರೆ .ಎಂ.ಜಿ.ಎಂ ಆಸ್ಪತ್ರೆ ಮೂಡಿಗೆರೆ ಹಾಗೂ ಮಲೆನಾಡು ಗ್ಯಾರೇಜ್ ಮತ್ತು ಕಾರ್ಮಿಕರ ಸಂಘ. ಮೂಡಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗಂಗನಮಕ್ಕಿಯ ಚಂದ್ರುರವರ ಗ್ಯಾರೇಜಿನಲ್ಲಿ ಟಿಟಿ ಚುಚ್ಚು ಮದ್ದು ಮತ್ತು ಆರೊಗ್ಯ ತಪಾಸಣಾ ಶಿಬಿರ ಹಾಗೂ ABHAಆರೊಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು Rtn.ಪ್ರದೀಪ್ ಕುಮಾರ್.ಹೆಚ್.ಆರ್. ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಹಿರಿಯ ರೋಟರಿ ಸದಸ್ಯರಾದ ಎನ್.ಎನ್.ಪ್ರಸನ್ನಕುಮಾರ್ ಭಾಗವಹಿಸಿದ್ದರು.
ಟಿಟಿ ಚುಚ್ಚು ಮದ್ದಿನ ಮಹತ್ವವನ್ನು ಗ್ಯಾರೇಜ್ ಕಾರ್ಮಿಕರಿಗೆ ತಿಳಿಸಿದರು.ಈ ಸಭೆಯಲ್ಲಿ ಮಲೆನಾಡು ಗ್ಯಾರೇಜ್ ಮಾಲಿಕರ ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರಾನ್ಸಿಸ್ ರೋಟರಿ ಸಂಸ್ಥೆಯ ಸೇವಾ ಕಾರ್ಯಕ್ರಮದ ಬಗ್ಗೆ ಕಾರ್ಮಿಕರಿಗೆ ತಿಳಿಸಿದರು.ಸಭೆಯಲ್ಲಿ ರೋಟರಿ ವಲಯಾಧಿಕಾರಿ ವಿನೊದ್ ಕುಮಾರ್ ಶೆಟ್ಟಿ,ನರೆಂದ್ರಶೆಟ್ಟಿ,ಕೆ.ಎಲ್.ಎಸ್.ತೇಜಸ್ವಿ,ಹೆಚ್ .ಕೆ.ಯೋಗಿಶ್,ಹೆಚ್.ಎ.ಆದರ್ಶ,ಡಾ.ಜೀವನ್.ಎಂ.ಜಿ.ಎಂ.ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಾಂಭವಿ.ಆರೋಗ್ಯಾಧಿಕಾರಿಗಳಾದ ಗಣೇಶ್ ಮತ್ತು ಇತರೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಗ್ಯಾರೇಜ್ ಮಾಲಿಕರ ಸಂಘದ ಕಾರ್ಯದರ್ಶಿ ವರುಣ್ ವಂದನಾರ್ಪಣೆ ಮಾಡಿದರು.

ಸುಮಾರು 70 ಗ್ಯಾರೇಜ್ ಕಾರ್ಮಿಕರು ಟಿಟಿ ಚುಚ್ಚುಮದ್ದನ್ನು ಪಡೆದರು.ಸುಮಾರು ನೂರು ಜನ ಬಿಪಿ. ಮತ್ತು ಮಧುಮೆಹ ಉಚಿತ ತಪಾಷಣೆಯನ್ನು ಮಾಡಿಸಿಕೊಂಡರು.ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









