लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಕ್ಷಿಣ ಕನ್ನಡ ಹಾಗೂ ಉಡುಪಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ದೋಚುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಹೆಡೆಮುರಿ‌ ಕಟ್ಟುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿ ಕೃಷ್ಣಾಪುರ ಮೂಲದ ಹಬೀಬ್ ಹಾಸನ ಮತ್ತು ಉಳ್ಳಾಲದ ಮೊಹಮ್ಮದ್ ಫೈಸಲ್ ಎಂದು ಗುರುತಿಸಲಾಗಿದೆ. ಇಬ್ಬರು ಈ ಹಿಂದೆ ಮಂಗಳೂರು ಕಾರಾಗೃಹ ಹಾಗೂ ಕಾರವಾರ ಜೈಲಿನಲ್ಲಿದ್ದು ಸಜೆ ಅನುಭವಿಸಿದ್ದರು.ಇಬ್ಬರ ಬಂಧನದ ನಂತರ 12 ಪ್ರಕರಣಗಳ ಪೈಕಿ 8 ಚೈನ್ ಸ್ನ್ಯಾಚಿಂಗ್ ಮತ್ತು ನಾಲ್ಕು ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ. ಬಂಧಿತರಿಂದ 14 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.ಹಬೀಬ್ ಹಸನ್ ವಿರುದ್ಧ 35 ಪ್ರಕರಣಗಳು ದಾಖಲಾಗಿದ್ದು, ಮೊಹಮ್ಮದ್ ಫೈಸಲ್ ವಿರುದ್ಧ ಉಡುಪಿ, ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 15 ಪ್ರಕರಣಗಳಿವೆ. ಮೊಹಮ್ಮದ್ ಫೈಸಲ್ ಎಂಬಾತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದ.


ಸಿಕ್ಕಿಬಿದ್ದಿದ್ದು ಹೇಗೆ ? :

ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ತಡಂಬೈಲ್‌ ಎಂಬಲ್ಲಿ ಪುಷ್ಪಾವತಿ ಎಂಬವರು ಜೂ.2 ರಂದು ಮುಂಜಾನೆ ತಮ್ಮ ಮನೆಯ ಕಂಪೌಂಡ್‌ ಒಳಭಾಗದಲ್ಲಿದ್ದ ಬಾವಿಯಿಂದ ನೀರು ಸೇದುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಅಂದಾಜು 1.25 ಲಕ್ಷ ರೂ. ಬೆಲೆಯ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು.

ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಕಳ್ಳರು ಕದ್ದ ಚಿನ್ನಾಭರಣವನ್ನು ಮಂಗಳೂರು ನಗರ ಮಾರಾಟಕ್ಕೆ ಯತ್ನಿಸಿ ವಿಫಲರಾಗಿ , ಸುರತ್ಕಲ್ ನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿತ್ತು. ಹೀಗಾಗಿ ಮಾದವ ನಗರ ಕೊಡಿಪ್ಪಾಡಿ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ, ದಿಚಕ್ರವಾಹನವೊಂದನ್ನು ನಿಲ್ಲಿಸಲು ಸೂಚಿಸಿದಾಗ ಸವಾರರಿಬ್ಬರು ವಾಹನದಿಂದ ಇಳಿದು ಓಡಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಲವು ಪ್ರಕರಣಗಳ ಬಯಲಿಗೆ ಬಂದಿತ್ತು.ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ ಆರೋಪಿಸಿಗಳು ಕದ್ದ ದ್ವಿಚಕ್ರ ವಾಹನಗಳನ್ನು ಚೈನ್ ಸ್ನ್ಯಾಚಿಂಗ್ ಗೆ ಬಳಸುತ್ತಿದ್ದರು.ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ 8000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬರಹ ಕೃಪೆ.

ಶಾಹಿನ್ ಉಜಿರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *