“ಮಂಗಳೂರು: ಸ್ಪೀಕರ್ ಯು.ಟಿ.ಖಾದರ್ ಅವರಿಗೆ ನಾಗರಿಕ ಸ್ವಾಗತ.”
1 min read
ಕರ್ನಾಟಕ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ತುಳು ಪರಿಷತ್ತಿನ ವತಿಯಿಂದ ಜೂನ್ 19 ರಂದು ಸೋಮವಾರ ನಗರದ ಟೌನ್ ಹಾಲ್‌ನಲ್ಲಿ ನಾಗರಿಕ ಸ್ವಾಗತವನ್ನು ನೀಡಲಾಯಿತು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಧಾನಮಂಡಲದ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಉಭಯ ಸದನಗಳ ಸದಸ್ಯರನ್ನೊಳಗೊಂಡ ನೈತಿಕ ಸಮಿತಿಯನ್ನು ರಚಿಸುವಂತೆ ಅವರು ತಮ್ಮ ಭಾಷಣದಲ್ಲಿ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರಿ ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ವಹಿಸಿದ್ದರು. ಮಂಗಳೂರು ಬಿಷಪ್ ರೆ.ಡಾ.ಪೀಟರ್ ಪೌಲ್ ಡಿಸೋಜ,ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ, ಎಂಎಲ್‌ಸಿ ಹರೀಶ್ ಕುಮಾರ್, ಸಿಟಿ ಬಸ್ ಆಪರೇಟರ್ಸ್ ಅಸೋಸಿಯೇಶನ್ ಅಧ್ಯಕ್ಷೆ ಜಯಶೀಲ ಅಡ್ಯಂತಾಯ, ತುಳು ಪರಿಷತ್ ಗೌರವಾಧ್ಯಕ್ಷ ಡಾ.ಪ್ರಭಾಕರ್ ನೀರ್ಮಾರ್ಗ, ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಇತರರು ಉಪಸ್ಥಿತರಿದ್ದರು
ಬರಹ ಕೃಪೆ.
ಶಾಹಿನ್ ಅತ್ತಾಜೆ.
ಬಂಗಾಡಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











