“ಸುರತ್ಕಲ್: ಯುವಕನಿಗೆ ಚೂರಿ ಇರಿತ.”
1 min read
ಇಲ್ಲಿನ ಜನತಾ ಕಾಲನಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು,ದಿನಾಂಕ 16/06/2023ರ ಶುಕ್ರವಾರದಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ಕಾನ ಕಾಲನಿ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದ ಆರೋಪಿ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ಕಾಲನಿ ಮಸೀದಿಯ ಬಳಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದ್ದು, ತ್ವಾಹಿರ್ ತನ್ನ ಕಾರಿನಲ್ಲಿ ತಂದಿದ್ದ ಚೂರಿಯಿಂದ ತನಗೆ ಚುಚ್ಚಿದ್ದಾನೆ ಎಂದು ಹಲ್ಲೆಗೊಳಗಾದ ಶಾಫಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇರಿತದಿಂದ ಶಾಫಿಯ ಕೈ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬರಹ ಕೃಪೆ.
ಶಾಹಿನ್ ಅತ್ತಾಜೆ.
ಬಂಗಾಡಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









