लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕ್ಷುಲ್ಲಕ ಕಾರಣಕ್ಕೆ ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಗೆ ಹಲ್ಲೆ ಮಾಡಿ, ತಲೆ ಮೇಲೆ ಮೂರು ಬಕೆಟ್ ನೀರು ಹಾಕಿ ದೌರ್ಜನ್ಯ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಎಐಟಿ ಕಾಲೇಜು ವೃತ್ತದಲ್ಲಿರುವ ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸೋಮವಾರ ಕಾಲೇಜಿನ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಅಕ್ಕಪಕ್ಕ ನೋಡಿದ್ದಾಳೆಂದು ಆರೋಪಿಸಿ ಕಾಲೇಜಿನ ಮುಖ್ಯಸ್ಥೆಯೊಬ್ಬರು ಹಲ್ಲೆ ಮಾಡಿದ್ದು, ಇದರಿಂದ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ಈ ವೇಳೆ ವಿದ್ಯಾರ್ಥಿನಿ ನಾಟಕ ಆಡುತ್ತಿದ್ದಾಳೆಂದು ಹೇಳಿ ಆಕೆಯನ್ನು ಎತ್ತಿಕೊಂಡು ಹೋಗಿ ಬಾತ್ ರೂಮಿನಲ್ಲಿ ಮಲಗಿಸಿ ಮೂರು ಬಕೆಟ್ ನೀರು ಹಾಕಿದ್ದಾರೆ. ಸಂಜೆ ಆಕೆಗೆ ಬೇರೆಯವರ ಬಟ್ಟೆ ಬದಲಾಯಿಸಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.ಇನ್ನು ವಾಹಿನಿಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ತಾಯಿ, ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಿದ್ದು, ಕಾಲೇಜು ಮುಖ್ಯಸ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಮಂಗಳವಾರ ಎಸ್ಪಿ ಬಳಿ ಮಾತನಾಡಿದ್ದು, ಅವರ ಸೂಚನೆ ಮೇರೆಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ವಿದ್ಯಾರ್ಥಿನಿ ತಾಯಿ ತಿಳಿಸಿದರು.ಮಕ್ಕಳ ಭವಿಷ್ಯಕ್ಕಾಗಿ ಕೂಲಿ ಕೆಲಸ ಮಾಡಿ 30 ಸಾವಿರ ಶುಲ್ಕ ಕಟ್ಟಿ ಮಗಳನ್ನು ಪ್ಯಾರಾ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದೇನೆ. ಮಗಳಿಗೆ ಮೈಗ್ರೇನ್ ತಲೆ ನೋವು ಇದ್ದು, ತಲೆ ನೋವು ಜೋರಾದಾಗ ಕುಸಿದು ಬೀಳುತ್ತಾಳೆ. ಕಾಲೇಜಿನ ಮುಖ್ಯಸ್ಥರು ನನ್ನ ಮಗಳಿಗೆ ವಿನಾಕಾರಣ ಕಿರುಕುಳ ನೀಡಿದ್ದು, ಆಕೆಯ ಜೀವಕ್ಕೆ ಹೆಚ್ಚುಕಮ್ಮಿಯಾದರೆ ಯಾರು ಹೊಣೆ, ಆಕೆಯ ಬಗ್ಗೆ ದೂರಿದ್ದರೆ ನಮ್ಮ ಬಳಿ ದೂರು ಹೇಳಬಹುದಿತ್ತು. ಬದಲಿಗೆ ಆಕೆಗೆ ಎಲ್ಲರ ಮುಂದೆ ಹಲ್ಲೆ ಮಾಡಿರುವುದಲ್ಲದೇ ಮೈಮೇಲೆ ನೀರು ಹಾಕಿ ದೌರ್ಜನ್ಯ ನಡೆಸಿರುವುದು ಯಾವ ನ್ಯಾಯ, ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಎಂದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *