“ಆಪ್ತನಿಗೆ ಅಪಘಾತ.”
1 min read
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಭರವಸೆಯ ಶಾಸಕಿ ಶ್ರೀಮತಿ ನಯನ ಮೋಟಮ್ಮನವರ ಆಪ್ತ ಸಹಾಯಕರಾದ ಮಧುಕುಮಾರ್ ಅವರು ಕರ್ತವ್ಯ ಮುಗಿಸಿಕೊಂಡು ಚಿಕ್ಕಮಗಳೂರಿನ ಅವರ ಮನೆಗೆ ಬೈಕಿನಲ್ಲಿ ಹೋಗುವಾಗ ನಾಯಿ ಅಡ್ಡ ಬಂದು ಬೈಕ್ ಅಪಘಾತವಾಗಿ ಕಾಲಿಗೆ,ಕೈಗೆ ಪೆಟ್ಟಾಗಿದೆ.
ನಂತರ ಈ ವಿಷಯ ಮಾನ್ಯ ಶಾಸಕರಿಗೆ ತಿಳಿದು, ಅವರು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನಂತರ ಮಧುಕುಮಾರ್ ಅವರನ್ನು ಚಿಕ್ಕಮಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಾಲು ಮತ್ತು ಕೈಗೆ ಎಕ್ಸ್ ರೇ ಮಾಡಿದ ನಂತರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮಾನ್ಯ ಶಾಸಕರ ಸಹಕಾರದಿಂದ ಈಗ ಮಧುಕುಮಾರ್ ಅವರು ಚಿಕ್ಕಮಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








