“ಮಾದಕ ವಸ್ತು ಸಮಾಜ ಹಾಗೂ ಕುಟುಂಬಕ್ಕೆ ಮಾರಕ.”
1 min read
ಈ ಪೊಟೋದಲ್ಲಿ ಕಾಣುತ್ತಿರುವ ಆ ಹೆಣ್ಣು, ಆ ಮಗಳು ಇಂದು ಈ ಭೂಮಿಯ ಮೇಲೆ ಇಲ್ಲ, ಆ ಯುವಕ ಎಲ್ಲವನ್ನೂ ಕಳೆದುಕೊಂಡು ಜೈಲಿನಲ್ಲಿದ್ದಾನೆ.ಈತ ಸಂಪತ್ತು, ವಿದ್ಯಾಭ್ಯಾಸ, ಸಮಾಜದಲ್ಲಿ ಗೌರವದ ಸ್ಥಾನಮಾನ ಎಲ್ಲವೂ ಇರುವ ಒಂದು ಒಳ್ಳೆಯ ಕುಟುಂಬದ ಯುವಕ, ಆದರೆ ಈ ಯುವಕನ ಮಾದಕವಸ್ತು ವ್ಯಸನದಿಂದಾಗಿ ಕೇವಲ ನಾಲ್ಕೇ ನಾಲ್ಕು ವರುಷದಲ್ಲಿ ಆ ಕುಟುಂಬವೇ ಸರ್ವನಾಶವಾಗಿ ಹೋಗಿದೆ.ನಿನ್ನೆಯಷ್ಟೇ ಆರು ವರುಷದ ಏನೂ ಅರಿಯದ ತನ್ನ ಸ್ವಂತ ಹೆಣ್ಮಗಳನ್ನು ರಾತ್ರಿ ಅತಿಕ್ರೂರವಾಗಿ ಮಚ್ಚಿನಿಂದ ಕೊಚ್ಚಿ, ಕಡಿದು ಈ ಯುವಕ ಕೊಂದುಹಾಕಿದ ಘಟನೆಯಿಂದ ಕೇರಳ ಮತ್ತೆ ಬೆಚ್ಚಿಬಿದ್ದಿತ್ತು.ಎರಡು ವರುಷದ ಹಿಂದೆಯಷ್ಟೇ ಈ ಯುವಕನ ಪತ್ನಿ ಈತ ಮಾದಕವಸ್ತು ಸೇವನೆಯ ಚಟದಿಂದ ಕೊಡುತ್ತಿದ್ದ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು.ನಾಲ್ಕು ವರುಷದ ಹಿಂದೆ ಈತನ ತಂದೆ ರೈಲು ಡಿಕ್ಕಿ ಹೊಡೆದು ಸಾವಿಗೀಡಾಗಿದ್ದರು ಆದರೆ ಇದೀಗ ಅದು ಕೂಡ ಆತ್ಮಹತ್ಯೆ ಆಗಿದೆ ಎಂಬ ಸಂಶಯ ಬಲವಾಗಿ ಮೂಡಿದೆ.ಆ ಹೆಣ್ಮಗುವನ್ನು ರಕ್ಷಿಸಲು ಓಡಿ ಬಂದ ಈತನ ತಾಯಿ ಕೂಡ ಮಚ್ಚೀನೇಟಿನಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ದಾಖಲಾಗಿದ್ದಾರೆ.ಇದರಿಂದ ನಾವು ಅರಿಯಬೇಕಾದದು ಏನೆಂದರೆ, ಕೇರಳ ಹಿಂದಿನ ಹಾಗೆ ಇಲ್ಲ, ಕೇರಳದಲ್ಲಿ ವಿವಿಧ ತರದ ಮಾದಕವಸ್ತುಗಳು ಯಥೇಚ್ಛವಾಗಿ ಎಲ್ಲೆಡೆ ಅತಿ ಸುಲಭವಾಗಿ ದೊರೆಯುತ್ತಿದೆ. ತಮ್ಮ ಮಕ್ಕಳು, ಅದು ಹೆಣ್ಣಾಗಿರಲಿ, ಗಂಡಾಗಿರಲಿ ಅವರು ಹೊರಗಡೆ ಎಲ್ಲಿಗೆ ಹೋಗುತ್ತಾರೆ, ಅವರ ಗೆಳೆಯರು ಯಾರು ಎಂಬ ಬಗ್ಗೆ ಗಮನ ಹರಿಸುವುದು ಉತ್ತಮ.
ಎಚ್ಚರ…..ಎಚ್ಚರ…..ಎಚ್ಚರ…..
ಇದು ಅವಿನ್ ಟಿವಿಯ ಕಳಕಳಿ ಕೂಡ ಹೌದು ವೀಕ್ಷಕರೇ,ನೀವು ಕೂಡ ಈ ರೀತಿಯ ಕೆಲಸಗಳಲ್ಲಿ ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಇಂತಹ ದುಶ್ಚಟಗಳಿಗೆ ದಾಸರಾಗಿದ್ದರೆ ಅವರಿಗೆ ತಿಳಿ ಹೇಳಿ ಅಥವಾ ವ್ಯಸನ ಮುಕ್ತಿ ಕೇಂದ್ರಗಳಿಗೆ ಸೇರಿಸಿ ಅವರು ದುಶ್ಚಟಗಳಿಂದ ದೂರವಾದರೆ ಅವರಿಗೂ,ಅವರ ಕುಟುಂಬಕ್ಕೂ,ಸಮಾಜಕ್ಕೂ ಉಪಕಾರವಾಗುತ್ತದೆ ಇಲ್ಲದಿದ್ದರೆ ಅವರ ಜೀವನ, ಕುಟುಂಬ,ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ.
ಮಾದಕ ವ್ಯಸನ ಮುಕ್ತ……ಸಮಾಜ ಸ್ವಾಸ್ಥ್ಯ……. ಉತ್ತಮ ದೇಶ…. ಇವುಗಳೇ ನಮ್ಮ ಗುರಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







