लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಮಲೆನಾಡ ಮಗಳು.”

1 min read

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಜುಲೈ 5 ರಿಂದ 18 ರ ವರೆಗೆ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಟಿ-11 ವಿಭಾಗದ 1,500 ಮೀಟರ್ಸ್ ಓಟದ ಸ್ಪರ್ಧೆಗೆ ಮೂಡಿಗೆರೆ ತಾಲ್ಲೂಕಿನ,ಬಾಳೂರು ಹೋಬಳಿಯ,ಗುಡ್ನಳ್ಳಿ ಗ್ರಾಮದ ಅಂಧ ಕ್ರೀಡಾಪಟುರಕ್ಷಿತಾ ರಾಜು ಆಯ್ಕೆಯಾಗಿದ್ದಾರೆ.ಈ ವರ್ಷದ ಫೆಬ್ರುವರಿಯಲ್ಲಿ ದುಬೈಯಲ್ಲಿ ನಡೆದ ಶಾರ್ಜಾ ಅಂತರರಾಷ್ಟ್ರೀಯ ಮುಕ್ತ ಪ್ಯಾರ ಅಥ್ಲೆಟಿಕ್ಸ್ ಅಥ್ಲೆಟಿಕ್ಸ್ ನ 1,500ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ರಕ್ಷಿತಾ.ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡಿದ್ದರು. ಕಳೆದ ವರ್ಷ ನವ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400, 800 ಹಾಗೂ 1500 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದು,ಪುಣೆಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400 ಹಾಗೂ 1500ಮೀ ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು.’ರಕ್ಷಿತಾ ರಾಜು ಅವರಿಗೆ ‘ಗೈಡ್ ರನ್ನರ್ ಆಗಿ ತಬರೇಶ್ ಹಾಗೂ ಸೌಮ್ಯಾ ನೆರವು ನೀಡುತ್ತಿದ್ದಾರೆ. ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ರಕ್ಷಿತಾ ಪದಕ ಗೆಲ್ಲುವ ವಿಶ್ವಾಸವಿದೆ. ಅಕ್ಟೋಬರ್‌ನಲ್ಲಿ ಚೀನಾದಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್ ಗೂ ಆಯ್ಕೆಯಾಗಿದ್ದಾರೆ’ ಎಂದು ಕೋಚ್ ರಾಹುಲ್ ಬಾಲಕೃಷ್ಣ ನಮ್ಮ ವಾಹಿನಿಗೆ ತಿಳಿಸಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಗಳೂರಿನ ಕೆಂಪನಹಳ್ಳಿ ಆಶಾಕಿರಣ ಶಾಲೆಯಲ್ಲಿ ಮುಗಿಸಿದ ರಕ್ಷಿತಾ ಸದ್ಯ ಬೆಂಗಳೂರಿನ ಕ್ರೀಡಾ ವಸತಿ ನಿಲಯದಲ್ಲಿದ್ದು ಪಿಯು ವಿದ್ಯಾರ್ಥಿನಿಯಾಗಿದ್ದಾರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *