लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ನ್ಯಾಯಕ್ಕಾಗಿ 4 ವರ್ಷದ ಮಗು ಜೊತೆ ರಾತ್ರಿ 1 ಗಂಟೆವರೆಗೂ ಠಾಣೆಯಲ್ಲಿ ಮಹಿಳೆಯಿಂದ ಏಕಾಂಗಿ ಪ್ರತಿಭಟನೆ.”

1 min read

ಎಫ್.ಐ.ಆರ್. ದಾಖಲಾಗದೆ ಮನೆಗೆ ಹೋಗಲ್ಲ ಅಂತ ಪಟ್ಟು ಹಿಡಿದ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಪೊಲೀಸ್ ಠಾಣೆಯಲ್ಲಿ ಒಂದು ಗಂಟೆ ರಾತ್ರಿಯವರೆಗೂ ಕುಳಿತ ಘಟನೆ ನಡೆದಿದೆ.


ಚಿಕ್ಕಮಗಳೂರು ಜಿಲ್ಲೆಯ,ಕಳಸ ತಾಲ್ಲೂಕಿನ,ಸಂಸೆ ಗ್ರಾಮದ ಶ್ರೀಮತಿ ಸುನೀತ ಎಂಬ ಮಹಿಳೆಯ ಪತಿ ರಾಜೇಂದ್ರ ಎಂಬುವವರಿಗೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ನವೀನ್ ಮತ್ತು ಶ್ರೇಯಾಂಶ್ ಕುಮಾರ್ ಎಂಬ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ.

ಸುನೀತಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರು ರಾಜೇಂದ್ರ ಅವರಿಗೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ.


ಈ ವಿಷಯವಾಗಿ ವಿಡಿಯೋ ಸಮೇತ ಮಹಿಳೆ ದೂರು ನೀಡಿದ್ದರು ಕುದುರೆಮುಖ ಪೊಲೀಸ್ ‌ಠಾಣೆಯಲ್ಲಿ ದೂರು ದಾಖಲಿಸಿಕೊಂಡಿಲ್ಲ ಇದರಿಂದಾಗಿ ಬೇಸತ್ತ ಮಹಿಳೆ ಸುನೀತಾ ಅವರು ತನ್ನ ಮಗುವಿನೊಂದಿಗೆ ಕಳಸ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ನನಗೆ ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತ ಮಧ್ಯರಾತ್ರಿಯವರೆಗೂ ಕುಳಿತ್ತಿದ್ದಾರೆನ್ನಲಾಗಿದೆ ಜೊತೆಗೆ ಮಗುವಿಗೆ ಪೊಲೀಸ್ ಠಾಣೆಯಲ್ಲೇ ಊಟ ಮಾಡಿಸಿ ಮಲಗಿಸಿದ್ದಾರೆನ್ನಲಾಗಿದೆ.

ಸುನೀತಾ ಅವರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪೊಲೀಸರು ಯುವಕರು ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.


ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

About Author

Leave a Reply

Your email address will not be published. Required fields are marked *