लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆಲವು ಅನಧಿಕೃತ ಗೊಬ್ಬರ ಉತ್ಪಾದಕ ಕಂಪನಿಗಳು ಕಳಪೆ ಗುಣಮಟ್ಟದ ಸಾವಯವ ಗೊಬ್ಬರ, ಬೇವಿನ ಹಿಂಡಿ, ಹಸಿರೆಲೆ ಗೊಬ್ಬರ ಬೀಜಗಳು ಹಾಗೂ ಜೈವಿಕ ಗೊಬ್ಬರಗಳು ಇನ್ನಿತ್ತರ ಕೃಷಿಗೆ ಸಂಬಂಧ ಪಟ್ಟ ಪರಿಕರಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿರುತ್ತದೆ.

ಅನಧಿಕೃತ ಗೊಬ್ಬರ ಉತ್ಪಾದಕ ಕಂಪನಿಗಳು ರೈತರ ಜಮೀನು ಅಥವಾ ಮನೆಗೆ ನೇರವಾಗಿ ಸಂಪರ್ಕ ಮಾಡಿ ಕಳಪೆ ಗುಣಮಟ್ಟದ ಪರಿಕರಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಂತಹವರ ಮಾಹಿತಿ ದೊರೆತಲ್ಲಿ ಸಹಾಯಕ ಕೃಷಿ ನಿರ್ದೇಶಕರ ಸಂಪರ್ಕ ಸಂಖ್ಯೆ 9483400044 ಗೆ ನೇರವಾಗಿ ಕರೆ ಮಾಡಿ ದೂರನ್ನು ನೀಡುವಂತೆ ಕೋರಿದ್ದಾರೆ. ಹಾಗೂ ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲಾ ರೈತ ಬಾಂಧವರು ಅಧಿಕೃತ ಮಾರಾಟ ಪರವಾನಗಿ ಹೊಂದಿರುವ ಕೃಷಿ ಪರಿಕರ ಮಳಿಗೆಗಳಲ್ಲಿ ಕೃಷಿಪರಿಕರಗಳನ್ನು ಮಾತ್ರ ಖರೀದಿಸಿ, ಅಧಿಕೃತ ಮಾರಾಟ ಪರವಾನಗಿ ಇಲ್ಲದೆ ಯಾವುದೇ ರೀತಿಯ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ನಿಷಿದ್ದ ಎಂದು ತಿಳಿಸಿದ್ದಾರೆ.

ವರದಿ‌.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *