“ಪ್ರಯಾಣಿಸುತ್ತಿದ್ದ ಬಸ್ನಲ್ಲೇ ಹೆಣ್ಣು ಮಗುವಿನ ಜನ್ಮ ನೀಡಿದ ಮಹಿಳೆ.”
1 min read
ಕೆಎ-18 ಎಫ್-0865 ನಂಬರ್ನ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ
ಚನ್ನರಾಯಪಟ್ಟಣ-ಹಾಸನ ಮಾರ್ಗಮಧ್ಯೆ ಮಹಿಳೆಯೊರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಬಿಹಾರ ಮೂಲದ ಗರ್ಭಿಣಿ ಮಹಿಳೆ ಕೂಲಿ ಕೆಲಸಕ್ಕೆ ಮೂಡಿಗೆರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಸ್ನಲ್ಲೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿ
ಬಸ್ನಲ್ಲೇ ಹೆರಿಗೆಗೆ ಸಹಾಯ ಮಾಡಿದ್ದಾರೆ ಕೂಡಲೇ ನಿರ್ವಾಹಕಿ ವಸಂತ ಹಾಗೂ ಬಸ್ನಲ್ಲಿದ್ದ ಬೆಂಗಳೂರು ಮೂಲದ ಮಹಿಳೆ ಸೇರಿ ಗರ್ಭಿಣಿ ಮಹಿಳೆಯ ಹೆರಿಗೆ ಮಾಡಿದ್ದಾರೆ.
ನಂತರ ಅದೇ ಬಸ್ಸಿನಲ್ಲಿದ್ದ ಸೋಮಶೇಖರ್ ಎಂಬ ಪ್ರಯಾಣಿಕರೊಬ್ಬರು 108 ಅಂಬ್ಯಲೆನ್ಸ್ಗೆ ಕರೆ ಮಾಡಿದ್ದಾರೆ.
ಅಂಬ್ಯುಲೆನ್ಸ್ನಲ್ಲಿ ತಾಯಿ ಮಗುವನ್ನು ಶಾಂತಿಗ್ರಾಮ ಆಸ್ಪತ್ರೆಗೆ ಕಳುಹಿಸಿ ಜೊತೆಗೆ ತೆರಳಿ ಹಣದ ಸಹಾಯ ಮಾಡಿ ಮಹಿಳಾ ಕಂಡಕ್ಟರ್ ವಸಂತ ಹಾಗೂ ಪ್ರಯಾಣಿಕರು ಮಾನವೀಯತೆ ಮೆರೆದಿದ್ದಾರೆ.
ಬಸ್ನ ಚಾಲಕ, ನಿರ್ವಾಹಕಿ ಹಾಗೂ ಪ್ರಯಾಣಿಕರ ಕಾರ್ಯಕ್ಕೆ ಸಾರ್ವಜನಿಕ ವಯಲದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
9448305990.




