लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸತತ ಹನ್ನೊಂದು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ ಪಡೆಯುತ್ತಿರುವ ನಜ಼ರತ್ ಶಾಲೆ.”

1 min read

ಐ.ಸಿ.ಎಸ್.ಇ ಬೋರ್ಡ್ ನ ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ನ ನಜ಼ರತ್ ಶಾಲೆ ಸತತ ಹನ್ನೊಂದನೇ ವರ್ಷವೂ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಯಲ್ಲಿ ಹಾಜರಾದ 39 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 7 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.


ಅರವಿಂದ ಹಾಗೂ ಭೂಮಿಕಾರವರ ಪುತ್ರಿ ಅಹಾನ ಎನ್. ಎ ಶೇಕಡಾ 98ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ.

ಶಾಂತ ಕುಮಾರ್ ಮತ್ತು ಅನಿತಾರವರ ಪುತ್ರಿ ಹಿತೈಷಿ ಎಸ್. ಪಿ ಶೇಕಡಾ 97.20 ಅಂಕಗಳೊಂದಿಗೆ ದ್ವಿತೀಯ.

ಗಣೇಶ್ ಮತ್ತು ಉಷಾರವರ ಪುತ್ರಿ ಅಭಿಷ್ಟ ಕೆ. ಜಿ ಶೇಕಡಾ 97 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
14 ವಿದ್ಯಾರ್ಥಿಗಳು ಶೇಕಡಾ 90ಕ್ಕೂ ಅಧಿಕ ಅಂಕ ಗಳಿಸಿದ್ದಾರೆ.
ಇವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *