लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದುಂಬಿಗಳು ಬಂದು ತುಟಿ ಇಟ್ಟು ಮುಟ್ಟಿ ಮಕರಂದ ಹೀರುವ ಮೊದಲೇ ಅರಳಿದ ಹೂವುಗಳನ್ನು ಕಿತ್ತು ಪ್ರೇಯಸಿಯ ಮುಡಿಗೆ ಒಂದು ತಳಮಳದ ತವಕದೊಂದಿಗೆ ಮುಡಿಸಬೇಕೆಂಬ ಪ್ರಿಯಕರನೊಬ್ಬನ ಹಂಬಲದಂತೆ,,ಪ್ರಜಾಪ್ರಭುತ್ವದ ಶ್ರೀಮಂತಿಕೆಯಾದ ಮತದಾನದ ಈ ಹಬ್ಬದಲ್ಲಿ ನಾವೇ ಮೊದಲಿಗರಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದೆವು ಎಂಬ ಸಂಭ್ರಮವನ್ನು ಬಗೆಬಗೆಯಾಗಿ ಮುಂದೆ ಬಂದು ಶಾಹಿ ಹಚ್ಚಿದ ಎಡಗೈ ತೋರುಬೆರಳನ್ನು ತೋರಿಸಿ ಹಂಚಿಕೊಳ್ಳುವ ಸಂಭ್ರಮದ ಪರಿಯು ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಸಾಲಾಗಿ ಬಿತ್ತನೆಯಾಗುತ್ತಿದ್ದಾವೆ.

ಈ ತರಹದ ಬಿತ್ತನೆಯು ಮತದಾರರ ಹಕ್ಕು ಮತ್ತು ಕರ್ತವ್ಯದ ಜೊತೆಗೆ ಪ್ರಜಾಪ್ರಭುತ್ವದ ಹೆಮ್ಮೆಯು ಹೌದು,ಆದರೆ ರಾಜ್ಯದ 5ಕೋಟಿ 31ಲಕ್ಷ 31ಸಾವಿರಕ್ಕೂ ಹೆಚ್ಚು ಮತದಾರರಿರುವ 224 ವಿಧಾನಸಭಾ ಕ್ಷೇತ್ರಗಳಿಗೆ 2615 ಆಕಾಂಕ್ಷಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು ಇದರಲ್ಲಿ ಮಹಿಳಾ ಅಭ್ಯರ್ಥಿಗಳು ಒಟ್ಟು ಕೇವಲ 184 ಎನ್ನುವುದು ಆತಂಕದ ಸಂಗತಿ, ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದರೂ ಕೂಡ ಈ ತಾರತಮ್ಯ ಸರಿಯಾಗುವುದು ಎಂದು?ಯಾವಾಗ ?

ಮುಂದಿನ ದಿನಗಳಲ್ಲಿ ಮಹಿಳಾ ಧ್ವನಿ ಈ ನೆಲದ ಆಳಕ್ಕಿಳಿದು ಮುಗಿಲೆತ್ತರಕ್ಕೆ ಹಬ್ಬಲಿ ಎಂಬ ಆಶಯದೊಂದಿಗೆ, ತಾಂಡವವಾಡುತ್ತಿರುವ ಜಾತಿ, ಭ್ರಷ್ಟಾಚಾರ, ಅಜ್ಞಾನ, ಆತ್ಮವಂಚನೆ, ಸೈದ್ಧಾಂತಿಕ ಗೊಂದಲಗಳೆಂಬ ಪಂಚ ಮಹಾಪಾತಕಗಳಿಗೆ ಬಲಿಯಾಗಿರುವ ಇಡೀ ಜನತೆಯನ್ನುಈ ರೋಗದಿಂದ ಬಿಡುಗಡೆಗೊಳಿಸಬೇಕಾಗಿದೆ.

ಬರಹ ಕೃಪೆ.

ಡಿ.ಎಂ.ಮಂಜುನಾಥಸ್ವಾಮಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *