ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ಕಳಸ ತಾಲ್ಲೂಕಿನ ಜೆ.ಇ.ಎಂ.,ಪ್ರಭೋಧಿನಿ ವಿದ್ಯಾಕೇಂದ್ರ,ಕೆ.ಪಿ.ಎಸ್.ಶಾಲೆ, ಸರ್ಕಾರಿ ಪ್ರೌಢಶಾಲೆ ಸಂಸೆ, ಸೇಕ್ರೆಡ್ ಹಾರ್ಟ್ ಶಾಲೆ ಹಿರೇಬೈಲ್,ಸರ್ಕಾರಿ ಪ್ರೌಢಶಾಲೆ ಹಿರೇಬೈಲ್, ಸರ್ಕಾರಿ ಪ್ರೌಢಶಾಲೆ ಕುದುರೆ ಮುಖ,ಬಾಳೆಹೊಳೆ ಶಾಲೆಗಳಿಗೆ ಉತ್ತಮ ಫಲಿತಾಂಶ.
1 min read
ಕಳಸ:ಕಳೆದ ತಿಂಗಳು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿದ್ದಾರೆ.


ಕಳಸ ಜೆಇಎಂ ಶಾಲೆಯು ಶೇ.100 ಫಲಿತಾಂಶ ಗಳಿಸಿದೆ.ಪರೀಕ್ಷೆ ಬರೆದಿದ್ದ ಎಲ್ಲ 48 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ.619 ಅಂಕ ಗಳಿಸಿದ ಸಂಸೆಯ ಪ್ರಕಾಶ್ ಜೈನ್ ಪುತ್ರಿ ಅದಿತಿ ಪಿ. ಜೈನ್ ತಾಲ್ಲೂಕಿಗೆ ಅಗ್ರಸ್ಥಾನ ಗಳಿಸಿದ್ದಾಳೆ.610 ಅಂಕ ಗಳಿಸಿದ ಕ್ಷಿತಿ ಕೊಡ್ಸರ, 609 ಗಳಿಸಿದ ಸೃಷ್ಟಿ ಮತ್ತು ಅಹನ್ ನಂತರದ ಸ್ಥಾನದಲ್ಲಿದ್ದಾರೆ ಎಂದು ಮುಖ್ಯೋಪಾಧ್ಯಾಯ ಪ್ರಶಾಂತ್ ಮಾಹಿತಿ ನೀಡಿದ್ದಾರೆ.



ಪ್ರಬೋಧಿನಿ ವಿದ್ಯಾ ಕೇಂದ್ರಕ್ಕೆ ಶೇ.98: ಪ್ರಬೋಧಿನಿ ವಿದ್ಯಾಕೇಂದ್ರದ 53 ವಿದ್ಯಾರ್ಥಿಗಳ ಪೈಕಿ ಒಬ್ಬ ಅನುತ್ತೀರ್ಣನಾಗಿದ್ದು ಶಾಲೆ ಶೇ.98 ಫಲಿತಾಂಶ ಪಡೆದಿದೆ.618 ಅಂಕ ಗಳಿಸಿದ ಹೊರನಾಡಿನ ಮೃತ್ಯುಂಜಯ ಜೈನ್-ಜ್ಯೋತಿ ದಂಪತಿಯ ಪುತ್ರಿ ಚಿಂತನ ಡಿ.ಜೈನ್ ಅಗ್ರಸ್ಥಾನ ಪಡೆದಿದ್ದಾಳೆ.616 ಅಂಕ ಗಳಿಸಿದ ಮೇಲಂಗಡಿಯ ರಾಜ್ ಕುಮಾರ್ ಪೈ-ರಚನಾ ದಂಪತಿಯ ಪುತ್ರಿ ರಮ್ಯಾ ಪೈ ಮತ್ತು 600 ಅಂಕ ಗಳಿಸಿದ ಕೊಳಮಗೆಯ ಭಾಸ್ಕರ ಗೌಡ-ದೇವಕಿ ದಂಪತಿಯ ಪುತ್ರಿ ಸಾನಿಕ ಕೆ.ಬಿ ನಂತರದ ಸ್ಥಾನ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಆನಂದ್ ತಿಳಿಸಿದ್ದಾರೆ.


ಕೆಪಿಎಸ್ ಶಾಲೆಗೆ ಶೇ.86: ಕಳಸ ಕೆಪಿಎಸ್ ಶಾಲೆಯ 108 ವಿದ್ಯಾರ್ಥಿಗಳ ಪೈಕಿ 93 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದು ಶಾಲೆಯು ಶೇ.86 ಫಲಿತಾಂಶ ಪಡೆದಿದೆ. ಶಾಲೆಯ ಇಂಗ್ಲೀಷ್ ಮಾಧ್ಯಮವು ಶೇ.100 ಫಲಿತಾಂಶ ಗಳಿಸಿದೆ.15 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಪಡೆದಿದ್ದಾರೆ.590 ಅಂಕ ಗಳಿಸಿದ ಹೊರನಾಡಿನ ವಿದ್ಯಾರ್ಥಿ ಹೆಚ್.ಎಸ್.ರಿಶಿತ್ ಮೊದಲ ಸ್ಥಾನ ಗಳಿಸಿದ್ದಾನೆ.ಈತ ಜೆಡಿಎಸ್ ಧುರೀಣ ಜ್ವಾಲನಯ್ಯ ಅವರ ಮೊಮ್ಮಗ ಮತ್ತು ಶ್ರೇಣಿಕ-ಪದ್ಮಶ್ರೀ ದಂಪತಿಯ ಪುತ್ರ.589 ಅಂಕ ಗಳಿಸಿದ ಸಂಸೆಯ ಕಲಾ ಶಿಕ್ಷಕ ಸಲೀಂ ಜಾವೆದ್ ಅವರ ಪುತ್ರಿ ಝಕಿಯಾ ಎರಡನೇ ಸ್ಥಾನ ಗಳಿಸಿದ್ದಾಳೆ ಎಂದು ಶಿಕ್ಷಕ ಸಂದೇಶ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಸಂಸೆ ಸರ್ಕಾರಿ ಪ್ರೌಢಶಾಲೆಯ 29 ವಿದ್ಯಾರ್ಥಿಗಳ ಪೈಕಿ 25 ಮಂದಿ ತೇರ್ಗಡೆ ಆಗಿದ್ದು ಶಾಲೆ 86 ಪ್ರತಿಶತ ಫಲಿತಾಂಶ ಗಳಿಸಿದೆ.
550 ಅಂಕ ಗಳಿಸಿರುವ ಮಾವಿನಕೊಂಬೆಯ ಕೃಷ್ಣೇಗೌಡ ಅವರ ಪುತ್ರಿ ಸಿಂಚನ ಅಗ್ರಸ್ಥಾನ ಗಳಿಸಿದ್ದಾಳೆ.ಆಕೆಯ ತಂದೆ ಕೃಷ್ಣೇಗೌಡ ಕಳಸ ಸಹಕಾರಿ ಸಂಘದಲ್ಲಿ ರಾತ್ರಿ ಕಾವಲುಗಾರ ಆಗಿದ್ದಾರೆ.

ಹಿರೇಬೈಲ್ ಸೇಕ್ರೆಡ್ ಹಾರ್ಟ್ ಶಾಲೆಯು ಶೇ.83 ಫಲಿತಾಶಂ ಗಳಿಸಿದೆ.ಶ್ರೀದೇವಿ 558 ಅಂಕ ಮತ್ತು ನಮ್ರತಾ 555 ಅಂಕ ಗಳಿಸಿದ್ದಾರೆ. ಕುದುರೆಮುಖ ಸರ್ಕಾರಿ ಶಾಲೆಯು ಶೇ.83, ಹಿರೇಬೈಲ್ ಸರ್ಕಾರಿ ಪ್ರೌಢಶಾಲೆ ಶೇ.84 ಮತ್ತು ಬಾಳೆಹೊಳೆ ಶಾಲೆಯು ತಾಲ್ಲೂಕಿನಲ್ಲಿ ಕನಿಷ್ಟ ಎನಿಸಿದ ಶೇ.73 ಫಲಿತಾಂಶ ಮಾತ್ರ ಪಡೆದಿದೆ.
ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ವಾಹಿನಿಯ ಪರವಾಗಿ ಅಭಿನಂದನೆಗಳು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

