ಲಯನ್ಸ್ ಕ್ಲಬ್ ವತಿಯಿಂದ “ಮಹಿಳಾ ದಿನಾಚರಣೆ” ಕಾರ್ಯಕ್ರಮ ಮೂಡಿಗೆರೆ || Women’s Day
1 min read
ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ಇಂದು ದಿನಾಂಕ 04/03/2022 ರಂದು ಕುನ್ನಳ್ಳಿಯ ಸಮುದಾಯ ಭವನದಲ್ಲಿ ಗ್ರಾಂ.ಪಂ.ಹಳೇಮೂಡಿಗೆರೆ, ವಿವಿಧ ಮಹಿಳಾ ಸಂಘಟನೆಗಳು, ಮತ್ತು ಸಂಚಿ ಹೊನ್ನಮ್ಮ ಮಹಿಳಾ ಮಂಡಳಿಯ ಆಶ್ರಯದಲ್ಲಿ “ಮಹಿಳಾ ದಿನಾಚರಣೆ” ಕಾರ್ಯಕ್ರಮ ವನ್ನ ಹಮ್ಮಿಕೊಳ್ಳಲಾಗಿತ್ತು.ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಲಯನ್ಸ ಕ್ಲಬ್ ಮೂಡಿಗೆರೆ ವತಿಯಿಂದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿಯ ಅಧ್ಯಕ್ಷ ರಾದ ಶ್ರೀಮತಿ ಕಮಲಾಕ್ಷಮ್ಮ ರವರನ್ನ ಸನ್ಮಾನಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಸಭೆಯಲ್ಲಿ ಮಾಜಿ ಮಂತ್ರಿ ಗಳಾದ ಶ್ರೀಮತಿ ಮೋಟಮ್ಮ ರವರು ಹಾಜರಿದ್ದರು. -ಬಿಎಲ್. ರಂಗನಾಥ ಗೌಡ ಅಧ್ಯಕ್ಷರು. ಲಯನ್ಸ್ ಕ್ಲಬ್ ಮೂಡಿಗೆರೆ .