day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಸ್ವಚ್ಛ ಭಾರತ ಸ್ವಚ್ಛ ಮೇವ ಜಯತೆ”ಘೋಷದೊಂದಿಗೆ ರಾಮೇಶ್ವರ ನಗರದ ಸ್ವಚ್ಛತೆಗೆ ಪೌರಕಾರ್ಮಿಕರದ ಸ್ವಯಂಸೇವಕರು.#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

“ಸ್ವಚ್ಛ ಭಾರತ ಸ್ವಚ್ಛ ಮೇವ ಜಯತೆ”ಘೋಷದೊಂದಿಗೆ ರಾಮೇಶ್ವರ ನಗರದ ಸ್ವಚ್ಛತೆಗೆ ಪೌರಕಾರ್ಮಿಕರದ ಸ್ವಯಂಸೇವಕರು.#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

“ಸ್ವಚ್ಛ ಭಾರತ ಸ್ವಚ್ಛ ಮೇವ ಜಯತೆ” ಘೋಷದೊಂದಿಗೆ ರಾಮೇಶ್ವರ ನಗರ ಕಾಲೋನಿ ಸ್ವಚ್ಛತೆಗೆ ಪೌರಕಾರ್ಮಿಕರದ ಸ್ವಯಂಸೇವಕರು.

ದಿನಾಂಕ 24 2021

ಮಾಸಿಕ ಸಭೆ ಹಾಗೂ ಸೇವೆ ಮಾಡುವ ಉದ್ದೇಶದಿಂದ ಸಾರ್ಥಕ ಹಾಗೂ ಯಶಸ್ವಿ ಸೇವಾಕಾರ್ಯ ನಡೆಸಿದ ಅದ್ಭುತ ದಿನವಿದು
ಪೂರ್ವನಿಯೋಜಿತ ಕಾರ್ಯಕ್ರಮವಾದ್ದರಿಂದ ಅದ್ಭುತ ರೂಪರೇಷ ಸಿದ್ಧಪಡಿಸಿ ಗ್ರಾಮಸ್ಥರು, ಜನಪ್ರತಿನಿಧಿಗಳು , ಅಧಿಕಾರಿಗಳು ಸರ್ವರನ್ನು ಒಟ್ಟುಗೂಡಿಸಿ ಮೂಡಿಗೆರೆಯ ಹೆಸಗಲ್ ಗ್ರಾಮಪಂಚಾಯಿತಿ ರಾಮೇಶ್ವರ ನಗರ ಕಾಲೋನಿ ಸಮುದಾಯ ಭವನದಲ್ಲಿ ಸಭೆ ಕರೆದು, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಕಸಬಾ ವಲಯ ಮೂಡಿಗೆರೆ, ಇವರು ತಮ್ಮ ಗ್ರಾಮವನ್ನು ಸ್ವಚ್ಛತಾ ಸೇವಾಕಾರ್ಯ ಮಾಡುವುದಕ್ಕೆ ಬರುವುದಾಗಿ ಕೇಳಿದಾಗ ಗ್ರಾಮಸ್ಥರೆಲ್ಲರೂ ಒಪ್ಪಿಕೊಂಡಿದ್ದು ನಾವು ಸಹ ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದು ಸರ್ವರೂ ಒಪ್ಪಿ, ದಿನಾಂಕ ನಿಗದಿಪಡಿಸಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದೆವು
ಇಪ್ಪತ್ತನಾಲ್ಕು ಜನ ಸ್ವಯಂಸೇವಕರಿಗೂ ಒಂದೊಂದು ಜವಾಬ್ದಾರಿಯನ್ನು ಕೊಟ್ಟು ಎಲ್ಲರೂ ಸಹ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಲು ಸಹಕರಿಸಿ ರುತ್ತಾರೆ.
ಅಂತೆಯೇ ಪ್ರತಿ ಮನೆಗೂ ಖುದ್ದಾಗಿ ಭೇಟಿ ನೀಡಿ ಸಹಕಾರ ಪಡೆಯಲಾಗಿದ್ದು. ಗ್ರಾಮದ ಯುವಕರನ್ನು ಒಟ್ಟುಗೂಡಿಸಿ ಈ ಸೇವಾಕಾರ್ಯಕ್ಕೆ ತಮ್ಮ ಶ್ರಮದಾನ ಅತ್ಯಮೂಲ್ಯ ಎಂದು ಹೇಳಿದಾಗ ಅವರು ಸಹ ಮುಂದೆ ಬಂದಿರುತ್ತಾರೆ. ಹಾಗೂ ಗ್ರಾಮ ಪಂಚಾಯತಿ ಅವರಿಂದ ಕಸ ಸಾಗಿಸುವ ವಾಹನ, ನೀರಿನ ಟ್ಯಾಂಕರ್, ಒದಗಿಸಿರುತ್ತಾರೆ. ನಮ್ಮ ಘಟಕದಿಂದಲೆ ಸ್ವಚ್ಛತೆಗೆ ಬೇಕಾದಂತಹ ಸಲಕರಣೆಗಳನ್ನು ಒಟ್ಟುಗೂಡಿಸಿ ಇಷ್ಟೆಲ್ಲ ಇರುವಿಕೆ ಗಳನ್ನು ಒಳಗೊಂಡು, ಎಲ್ಲಿಯೂ ಸಹ ಲೋಪದೋಷ ಬಾರದ ಹಾಗೆ ಈ ಸೇವಾಕಾರ್ಯವನ್ನು ಯಶಸ್ವಿಯಾಗಿಸಲು ಎಲ್ಲಾ ಸದಸ್ಯರು ಸಿದ್ದರಾದೆವು.

ಪೌರಕಾರ್ಮಿಕರಿಗಿಂತ ನಾವೇನು ಕಡಿಮೆಯಿಲ್ಲ ಎಂಬಂತೆ ಚರಂಡಿ, ಮೋರಿ, ಗಟಾರ ಗಳಿಗೆ ಇಳಿದು ತ್ಯಾಜ್ಯ ವನ್ನು ತುಂಬಿಸಿ ಹೆಗಲ ಮೇಲೆ ಹೊತ್ತು ಕಸದ ವಾಹನಕ್ಕೆ ತುಂಬಿಸಲಾಯಿತು. ರಸ್ತೆಬದಿಯ ಬೇಲಿ ಹಾಗೂ ಅನಗತ್ಯವಾಗಿ ಬೆಳೆದ ಗಿಡಗಂಟೆ ಯನ್ನು ಯನ್ನು ಕತ್ತರಿಸಿ ತುಂಬಿಸಿ ಸಾಗಿಸಲಾಯಿತು. ಟ್ರಾಕ್ಟರಿನ ಬೃಹತ್ ಟ್ರಾಲಿಯಲ್ಲಿ ಸತತ ನಾಲ್ಕು ಲೋಡ್ ಗಳಷ್ಟು ತ್ಯಾಜ್ಯವನ್ನು ತುಂಬಿಸಿ ಸಾಗಿಸಿದ್ದು, ಸಾಂಕ್ರಾಮಿಕ ರೋಗಗಳು ಹರಡದಂತೆ ಸೊಳ್ಳೆ ನಿಯಂತ್ರಣಕ್ಕಾಗಿ ಬೀಚಿಂಗ್ ಪೌಡರ್ ಆಗೋ ಸುಣ್ಣವನ್ನು ಎಲ್ಲಾ ಕಡೆ ಸಿಂಪಡಣೆ ಮಾಡಲಾಯಿತು.
ಗ್ರಾಮಪಂಚಾಯತಿಯ ಸರ್ವ ಸದಸ್ಯರು ಸ್ವಯಂಸೇವಕ ಹಾಗೂ ಗ್ರಾಮದ ಸ್ವಚ್ಛತೆಗೆ ಕೈಜೋಡಿಸಿ ದಂತಹ ಸರ್ವರಿಗೂ ಮಧ್ಯಾಹ್ನದ 200 ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ.

ನಡೆದಾಡುವ ಜ್ಞಾನಕೋಶ ಯೋಜನಾಧಿಕಾರಿಯವರದ ಶ್ರೀ ವಿಠ್ಠಲ್ ಪೂಜಾರಿ ಸರ್ ರವರ ಉಸ್ತುವಾರಿ, ವಿಘ್ನೇಶ ಅವರ ಮಾರ್ಗದರ್ಶನ, ಕಾಮಾಕ್ಷಿ ಮೇಡಂ ರ ಸೇವಾನುಭವ,ಎಂಥದ್ದೇ ಕಠಿಣ ಸಂದರ್ಭವಿರಲಿ ತಂಡವನ್ನು ಮುನ್ನಡೆಸುವಂತಹ ಪ್ರಬುದ್ಧ ನಾಯಕತ್ವ ಗುಣವುಳ್ಳ ಪ್ರವೀಣ್ ಪೂಜಾರಿ ರವರು ಅದ್ಭುತವಾದ ಈ ಸೇವಾಕಾರ್ಯದ ದಿನವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ ಎಲ್ಲರಿಗೂ ಶತ ಕೋಟಿ ನಮನಗಳು. ಈ ಒಂದು ಕಾರ್ಯಕ್ರಮದಲ್ಲಿ ಯಾವುದೇ ತರದ ಅನಾಹುತಗಳ ಆದಾಗ ನಮ್ಮ ತಂಡ ಸದಸ್ಯರಿಗೆ ಪ್ರಥಮ ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನು ನಮ್ಮ ತಂಡದ ರವೀಂದ್ರ ಇವರು ಒದಗಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಮೂಡಿಗೆರೆ ತಾಲೂಕಿನ ಯೋಜನಾಧಿಕಾರಿ ವಿಠಲ ಪೂಜಾರಿ ಮೇಲ್ವಿಚಾರಕರಾದ ವಿಘ್ನೇಶ್.
ಸೇವಾ ಪ್ರತಿನಿಧಿಯಾದ ಕಾಮಾಕ್ಷಿ.
ಸಂಯೋಜಕ ಪ್ರವೀಣ್ ಪೂಜಾರಿ.
ರವಿ ಪೂಜಾರಿ ಹರೀಶ್ ಗೌಡ.
ಮಂಜುನಾಥ್ ಪಟ್ಟಣ ಪಂಚಾಯಿತಿ.
ಮಂಜುನಾಥ್.
ಪೆಟ್ರೋಲ್ ಬಂಕ್ ರಘು ಗೌಡ.
ಅಶ್ವಿನ್ ಶಶಿ ಕೆಲ್ಲೂರು. ಸಂತೋಷ್. ಕಿಶೋರ್. ಪ್ರವೀಣ್. ಅಚ್ಚು. ಸುರೇಶ್. ಸುನಿಲ್. ಪ್ರತಾಪ್. ಪ್ರಕಾಶ್. ಗಣೇಶ್. ಸಂತೋಷ್ .ಪವನ್. ಕೌಶಿಕ್. ಗ್ರಾಮದ ಗ್ರಾಮಸ್ಥರು ಹಾಗೂ ಹೆಸಗಲ್ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author